ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರವನ್ನು ಏಳಿಸುವ ಕೆಲಸ ಮಾಡ್ತೇವೆ: ಬಿಎಸ್‌ವೈ

ಮಂಗಳವಾರ, 2 ಸೆಪ್ಟಂಬರ್ 2014 (14:48 IST)
ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು ನಿದ್ರೆಯಿಂದ ಏಳಿಸುವ ಕೆಲಸ ಮಾಡುತ್ತೇವೆ ಎಂದು ಸಂಸದ ಯಡಿಯೂರಪ್ಪ ಇಂದು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.  ಸೆ. 10ರಂದು ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ, ಸೆ. 11ರಂದು ಗುಲ್ಬರ್ಗ, ಯಾದಗಿರಿಗೆ ಭೇಟಿ ನೀಡಿ ಪ್ರವಾಸದ ನಂತರ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಯಾವ ಸಚಿವರೂ ಪರಿಸ್ಥಿತಿ ತಿಳಿಯುವ ಪ್ರಯತ್ನ ಮಾಡಿಲ್ಲ. ಬರದ ಜಿಲ್ಲೆಗಳಲ್ಲಿ ಯಾವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಯುವ ಗೋಜಿಗೆ ಹೋಗಿಲ್ಲ ಎಂದು ರಾಜ್ಯಸರ್ಕಾರವನ್ನು ಅವರು ಟೀಕಿಸಿದರು.  ಕೇಂದ್ರ ಸರ್ಕಾರ 100 ದಿನಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಸಮಯಪ್ರಜ್ಞೆಯಿಂದ ಆಡಳಿತದಲ್ಲಿ ಬೆಳವಣಿಗೆ ಯಾಗಿದೆ.
ಬಿಜೆಪಿ ಸರ್ಕಾರ 8 ಗುರಿಗಳನ್ನು ಮುಟ್ಟುವುದರಲ್ಲಿ ಸಂಶಯವಿಲ್ಲ.

 ಅಗತ್ಯವಸ್ತುಗಳ ಬೆಲೆ ಇಳಿಯುತ್ತಿದೆ. ಬ್ಯಾಂಕ್ ಖಾತೆ ತೆರೆಯುವುದು ಮಹತ್ವದ ಯೋಜನೆ.ಈರುಳ್ಳಿ ಬೆಲೆ ನಿಯಂತ್ರಣಕ್ಕೆ ತಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವ ವಿಶ್ವಾಸವಿದೆ.  ಆ ಯೋಜನೆಗೆ ಪಕ್ಷಭೇದ ಮರೆತು ಬೆಂಬಲಿಸಬೇಕು. ನೂರು ದಿನಗಳಲ್ಲಿ ಅಚ್ಚರಿಯ ಸಾಧನೆಯಾಗಿದೆ ಎಂದು ಯಡಿಯೂರಪ್ಪ ಕೇಂದ್ರ ಸರ್ಕಾರದ ಸಾಧನೆಯನ್ನು ಹೊಗಳಿದರು. 

ವೆಬ್ದುನಿಯಾವನ್ನು ಓದಿ