ಸಚಿವರ ಬಣ್ಣ ಬಯಲಾಗುತ್ತದೆ ಎನ್ನಲು ಯಡಿಯೂರಪ್ಪ ಸಿಬಿಐ ನಿರ್ದೇಶಕರೇ?: ಸಚಿವ ಪಾಟಿಲ್ ಕಿಡಿ

ಬುಧವಾರ, 21 ಡಿಸೆಂಬರ್ 2016 (12:35 IST)
ಸದ್ಯದಲ್ಲಿಯೇ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರ ಬಣ್ಣ ಬಯಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದಾರೆ. ಬಿಎಸ್‌ವೈಗೆ ಅಕ್ರಮ ಎಸಗಿರುವ ಸಚಿವರ ಹೆಸರು ಗೊತ್ತಿದ್ದರೆ ಬಹಿರಂಗಪಡಿಸಲಿ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸವಾಲ್ ಎಸಗಿದ್ದಾರೆ.
 
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮದಲ್ಲಿ ಭಾಗಿಯಾಗಿರುವ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರ ಬಣ್ಣ ಬಯಲಾಗುತ್ತದೆ ಎಂದು ಹೇಳಲು ಯಡಿಯೂರಪ್ಪ ಏನು ಸಿಬಿಐ ನಿರ್ದೇಶಕರೇ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. 
 
ನಾನಂತೂ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಅಕ್ರಮ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲು ಸಿಬಿಐ, ಇಡಿ. ಹಾಗೂ ಎಸಿಬಿಯಂತಹ ಸಂಸ್ಥೆಗಳಿವೆ. ಯಡಿಯೂರಪ್ಪ ಅವರು ಸಹ ಮುಖ್ಯಮಂತ್ರಿ ಆಗಿದ್ದವರು. ಆಧಾರ ರಹಿತ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು. 
 
ಸದ್ಯದಲ್ಲಿಯೇ ರಾಜ್ಯ ಸರಕಾರದ ಎಂಎಲ್‌ಸಿ ಹಾಗೂ ಸಚಿವರ ಬಣ್ಣ ಬಯಲಾಗಲಿದೆ. ನಾನು ಭವಿಷ್ಯ ನುಡಿಯುತ್ತಿಲ್ಲ. ಬದಲಿಗೆ ಇನ್ನೆರೆಡು ದಿನ ಕಾದು ನೋಡಿ. ಇದೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯರ ಬುಡಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ