ಸಚಿವ ರಮೇಶ್ ಕುಮಾರ್ ತಾಕತ್ತು ಎಲ್ಲಿ ಹೋಗಿದೆ: ಕುಮಾರಸ್ವಾಮಿ ವ್ಯಂಗ್ಯ

ಶುಕ್ರವಾರ, 10 ಫೆಬ್ರವರಿ 2017 (12:21 IST)
ತಾಕತ್ತು ಪ್ರದರ್ಶಿಸಲು ಸಚಿವ ಸ್ಥಾನ ಬೇಕು ಎಂದು ಸಚಿವರಾಗುವ ಮುನ್ನ ಹೇಳಿಕೆ ನೀಡಿದ್ದ ರಮೇಶ್‌ಕುಮಾರ್‌ ಅವರ ತಾಕತ್ತು ಇದೀಗ ಎಲ್ಲಿಗೆ ಹೋಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
 
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳ ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸಚಿವರಿಗೆ ಈ ಗತಿಯಾದರೇ ಸಾಮಾನ್ಯ ಜನರ ಪಾಡೇನು ಎಂದು ಕಿಡಿಕಾರಿದರು.
 
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಿಗಳ ಮುಂದೆ ದರ್ಪ ಪ್ರದರ್ಶಿಸುತ್ತಿದೆ. ಬೇಜವಾಬ್ದಾರಿಯುತವಾಗಿ ನಡೆಸಿಕೊಳ್ಳುತ್ತಿಲ್ಲವಾದ್ದರಿಂದ ಜನರ ಕಾರ್ಯಗಳಲ್ಲಿ ಹಿನ್ನೆಡೆಯಾಗಿದೆ. ಅಧಿಕಾರಿಗಳನ್ನು ಹತೋಟಿಯಲ್ಲಿಡಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. 
 
ವಿಧಾನಸಭೆ ಅಧಿವೇಶನ ಮುಕ್ತಾಯಗೊಳ್ಳಲು ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಎರಡು ದಿನಗಳಲ್ಲಿ ಎಷ್ಟು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ, ಜೆಡಿ ಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ