ಸಿಎಂ ಸಿದ್ದರಾಮಯ್ಯಗೆ ಯಾರು ವಾಚ್ ಕೊಟ್ಟರು ಎನ್ನುವ ತನಿಖೆಯಾಗಲಿ: ಶೆಟ್ಟರ್

ಮಂಗಳವಾರ, 1 ಮಾರ್ಚ್ 2016 (13:17 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಚ್ ಯಾರು ಕೊಟ್ಟರು ಎನ್ನುವ ಬಗ್ಗೆ ತನಿಖೆಯಾಗಲಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.
 
ಶೆಟ್ಟರ್ ಒತ್ತಾಯಕ್ಕೆ ಕೆಂಡಾಮಂಡಲವಾದ ಅಡಳಿತ ಪಕ್ಷದ ಸದಸ್ಯರ ವಾಚ್ ವಿಷಯದಲ್ಲಿ ನಿಲುವಳಿ ಮಂಡನೆಗೆ ಅವಕಾಶವಿಲ್ಲ ಎಂದು ತಿರುಗೇಟು ನೀಡಿದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಸಚಿವ ದೇಶಪಾಂಡೆ, ಜಾರ್ಜ್, ಪರಮೇಶ್ವರ್ ಸೇರಿದಂತೆ ಹಲವರು ವಿಪಕ್ಷಗಳ ವಿರುದ್ದ ತೀವ್ರ ವಿರೋಧ ವ್ಯಕ್ತಪಡಿಸಿದರು.
 
ಸಭಾಪತಿ ಕಾಗೋಡು ತಿಮ್ಮಪ್ಪ ವಾಚ್ ವಿಶಯ ಕುರಿತಂತೆ ವಿಪಕ್ಷಗಳಿಗೆ ಚರ್ಚೆಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಯಡಿಯೂರಪ್ಪ, ಕುಮಾರಸ್ವಾಮಿ, ಸದಾನಂದಗೌಡ ಸೇರಿದಂತೆ ಹಲವರು ಕಟ್ಟಿಕೊಂಡ ದುಬಾರಿ ವಾಚ್‌ಗಳ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.
 
ತಮ್ಮ ಪ್ರಶ್ನೆಗಳಿಗೆ ಬಿಜೆಪಿ ಮೊದಲು ಉತ್ತರಿಸಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಪಟ್ಟು ಹಿಡಿದರು. ವಿಧಾನ ಪರಿಷತ್‌ನಲ್ಲೂ ವಾಚ್ ವಿಷಯ ಪ್ರತಿಧ್ವನಿಸಿತು. ಉಭಯ ಕಲಾಪಗಳು ವಾಚ್ ಗದ್ದಲದಲ್ಲಿ ಮುಳುಗಿಹೋದವು.

ವೆಬ್ದುನಿಯಾವನ್ನು ಓದಿ