ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಯಾಕೆ ಸಹಕರಿಸುತ್ತಿಲ್ಲ: ಸುಪ್ರೀಂಕೋರ್ಟ್

ಬುಧವಾರ, 20 ಆಗಸ್ಟ್ 2014 (14:49 IST)
ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಸಂಬಂಧಿಸಿದಂತೆ ಯಾಕೆ ಸಹಕರಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ನಿತ್ಯಾನಂದ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. 2004ರಲ್ಲಿ ಪ್ರಕರಣ ದಾಖಲಾಗಿದ್ದು, ಇಷ್ಟು ತಡವಾಗಿ ಪುರುಷತ್ವ ಪರೀಕ್ಷೆಯ ಔಚಿತ್ಯವೇನು, ಆದ್ದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ನಿತ್ಯಾನಂದ ಪರ ವಕೀಲರು ವಾದಿಸಿದರು.

ಆದರೆ ಪುರುಷತ್ವ ಪರೀಕ್ಷೆಯಿಂದ ನಿಮಗೇನು ತೊಂದರೆಯಾಗುತ್ತದೆ. ಪುರುಷತ್ವ ಪರೀಕ್ಷೆಗೆ ನಿತ್ಯಾನಂದ ವಿರೋಧಿಸುತ್ತಿರುವುದು ಏಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿ, ತನಿಖಾ ತಂಡಕ್ಕೆ ಸಹಕರಿಸಬೇಕು ಎಂದು ನ್ಯಾಯಮೂರ್ತಿ ರಂಜನ್ ದೇಸಾಯಿ ಸೂಚಿಸಿದರು.

ನಿತ್ಯಾನಂದ ಕಾನೂನು ಮಾರ್ಗಗಳ ಮೂಲಕ ಅಡೆತಡೆ ಹಾಕುತ್ತಿದ್ದಾರೆ. ಪುರುಷತ್ವ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ನಾನಾ ಕಾರಣಗಳನ್ನು ನೀಡಿದ್ದಾರೆ ಎಂದು ಪ್ರಾಸಿಕ್ಯೂಟರ್ ವಾದಿಸಿದ್ದರು. 

ವೆಬ್ದುನಿಯಾವನ್ನು ಓದಿ