ರಾಘವೇಶ್ವರ ಶ್ರೀಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಔಚಿತ್ಯವೇನು: ವಕೀಲರ ಪ್ರಶ್ನೆ

ಶುಕ್ರವಾರ, 21 ನವೆಂಬರ್ 2014 (18:11 IST)
ಗಾಯಕಿ ಪ್ರೇಮಲತಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆ ಪ್ರಶ್ನಿಸಿದ ರಿಟ್ ಅರ್ಜಿ ವಿಚಾರಣೆಯಲ್ಲಿ, 
ರಾಘವೇಶ್ವರ ಶ್ರೀಗಳು ಒಬ್ಬ ಸಮರ್ಥ ಪುರುಷರೆಂಬ ಬಗ್ಗೆ ವಿವಾದವಿಲ್ಲ.

ಹೀಗಾಗಿ ವೈದ್ಯಕೀಯ ಪರೀಕ್ಷೆ ನಡೆಸುವ ಔಚಿತ್ಯವೇನು ಎಂದು ಶ್ರೀಗಳ ಪರ ವಕೀಲ ರಾಘವನ್ ಪ್ರಶ್ನಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಿಂದ ಶ್ರೀಗಳ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದೂ ಅವರು ವಾದಿಸಿದರು.ಸಿಐಡಿ ನೋಟಿಸ್‌ನಲ್ಲಿ ವೈದ್ಯಕೀಯ ಪರೀಕ್ಷೆಯ ಸಮಯ, ಸ್ವರೂಪ ತಿಳಿಸಿಲ್ಲ ಎಂದೂ ರಾಘವನ್ ವಾದಿಸಿದರು.

 ರಾಘವೇಶ್ವರ ಶ್ರೀಗಳಲ್ಲಿ ಪುರುಷತ್ವವಿಲ್ಲ ಎಂಬ ವಾದವನ್ನು ನಾವು ಮಾಡಿಲ್ಲ. ಅವರ ಸಮರ್ಥ ಪುರುಷರೆಂಬ ಬಗ್ಗೆ ವಿವಾದವಿಲ್ಲ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ನೋಟಿಸ್ ನೀಡಿರುವುದನ್ನು ರದ್ದುಮಾಡುವಂತೆ ವಕೀಲರು ಒತ್ತಾಯಿಸಿದರು. ವಿಚಾರಣೆಯನ್ನು ನ. 24 ತಾರೀಖಿಗೆ ಮುಂದೂಡಲಾಗಿದೆ. 

ವೆಬ್ದುನಿಯಾವನ್ನು ಓದಿ