ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ದಾಂಧಲೆ

ಮಂಗಳವಾರ, 8 ಡಿಸೆಂಬರ್ 2015 (18:44 IST)
ಮೈಸೂರಿನ ಎಚ್.ಡಿ.ಕೋಟೆಯಲ್ಲಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ರೈತರು ಬೆಳೆದಿದ್ದ ಬಾಳೆ, ಬತ್ತದ  ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ರಸ್ತೆ ಬದಿ ನಿಲ್ಲಿಸಿದ್ದ ಆಟೋ, ಬೈಕ್‌ಗಳನ್ನು ಕೂಡ ಕಾಡಾನೆಗಳು ಜಖಂ ಮಾಡಿವೆ. ಈಗ ಸಂತೆ ಮುಗಿದ ಮೇಲೆ ಕಾಡಾನೆಗಳನ್ನು ಕಾಡಿಗೆ ಕಳಿಸುವ ಕಾರ್ಯಾಚರಣೆ ಮಾಡುವುದಾಗಿ ಅರಣ್ಯಾಧಿಕಾರಿಗಳು ಹೇಳಿದ್ದಾರೆ.

 ಆನೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದರೆ ಅವು ಸಂತೆಗೆ ನುಗ್ಗುವ ಸಾಧ್ಯತೆಯಿದ್ದು ಸಾಕಷ್ಟು ಸಾವು, ನೋವು ಸಂಭವಿಸುವುದರಿಂದ ಆನೆಗಳ ಕಾರ್ಯಾಚರಣೆಯನ್ನು ಸಂತೆಯ ನಂತರ ನಡೆಸಲು ನಿರ್ಧರಿಸಲಾಯಿತು.

 ಕಾಡಾನೆ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ನೆರೆದು ಗದ್ದಲ ಮಾಡಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಅವುಗಳನ್ನು ಕಾಡಿಗಟ್ಟಲು ಹರಸಾಹಸ ಮಾಡಬೇಕಾಗಿದೆ. 

ವೆಬ್ದುನಿಯಾವನ್ನು ಓದಿ