ಗೋಹತ್ಯೆ ಪ್ರತಿಬಂಧಕ ಮಸೂದೆ ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರ

ಭಾನುವಾರ, 21 ಡಿಸೆಂಬರ್ 2014 (11:25 IST)
ಬೆಳಗಾವಿಯ ಅಧಿವೇಶನದಲ್ಲಿ ಗೋ ಹತ್ಯೆ  ನಿಷೇಧ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಗೋಹತ್ಯೆ ಪ್ರತಿಬಂಧಕ ಮಸೂದೆಯನ್ನು ಮಂಡನೆ ಮಾಡಿತ್ತು. 
 
ಸದನದ ಬಾವಿಗಿಳಿದ ಬಿಜೆಪಿ ಧರಣಿ ಮತ್ತು ಘೋಷಣೆ ಕೂಗುತ್ತಿದ್ದ ನಡುವೆ ವಿಧಾನಸಭೆ ಗೋಹತ್ಯೆ ಮಸೂದೆಯನ್ನು ಹಿಂದಕ್ಕೆ ಪಡೆಯುವ ವಿಧೇಯಕವನ್ನು ಅಂಗೀಕರಿಸಿತು. ಗೋಹತ್ಯೆ ನಿಷೇಧ ಮಸೂದೆ ಉಲ್ಲಂಘಿಸಿದವರೆಗೆ ಕಠಿಣ ಶಿಕ್ಷೆಯನ್ನು ಬಿಜೆಪಿ ಆಡಳಿತಾವಧಿಯಲ್ಲಿ ಹೇರಿತ್ತು.

ಕಾಂಗ್ರೆಸ್ ಈ ಮಸೂದೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆಗಿನ ರಾಜ್ಯಪಾಲ ಭಾರದ್ವಾಜ್ ರಾಷ್ಟ್ರಪತಿಗಳ ಅವಗಾಹನೆಗೆ ಇದನ್ನು ಕಳಿಸಿದ್ದರು. ರಾಷ್ಟ್ರಪತಿ ಈ ಕುರಿತು ಸ್ಪಷ್ಟೀಕರಣ ಕೇಳಿದ್ದರು.ಈಗ ಕಾಂಗ್ರೆಸ್ ಮಸೂದೆಯನ್ನು ವಾಪಸ್ ಪಡೆದಿದೆ. ಮಸೂದೆ ಹಿಂತೆಗೆದುಕೊಂಡಿದ್ದರಿಂದ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಗೋಸಂರಕ್ಷಣೆ ಕಾಯ್ದೆ 1964ರ ಮರುಸ್ಥಾಪನೆಯಾಗಿದೆ.

ವೆಬ್ದುನಿಯಾವನ್ನು ಓದಿ