ಮುಂದಿನ 10 ವರ್ಷಗಳಲ್ಲಿ ಭಾರತ ಸೂಪರ್ ಪಾವರ್ ದೇಶವಾಗಲಿದೆ: ವಿ.ಆರ್.ದೇಶಪಾಂಡೆ

ಶನಿವಾರ, 7 ಜನವರಿ 2017 (10:59 IST)
ಮುಂದಿನ 10 ವರ್ಷಗಳಲ್ಲಿ ಭಾರತ ಸೂಪರ್ ಪಾವರ್ ದೇಶವಾಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ವಿ.ಆರ್.ದೇಶಪಾಂಡೆ ತಿಳಿಸಿದ್ದಾರೆ.
 
'ಯುವ ಪ್ರವಾಸಿ ದಿವಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಟಾಪ್ ನಗರಗಳಲ್ಲಿ ಕರ್ನಾಟಕ ಸಹ ಒಂದು. ರಾಜ್ಯದಲ್ಲಿ ಎಲ್ಲವೂ ಇದೆ. ಉದ್ಯೋಗ, ಸಂಶೋಧನೆ ಹಾಗೂ ಹೂಡಿಕೆಗೆ ಸಾಕಷ್ಟು ಅವಕಾಶಯಿದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಯ ಪ್ರವೃತ್ತಿಯಾಗಿದೆ. ಹೀಗಾಗಿ ರಾಜ್ಯಕ್ಕೆ ಸಾಕಷ್ಟು ಬಂಡವಾಳ ಹರಿದುಬರುತ್ತಿದೆ ಎಂದರು.
 
ದೇಶದ ಟಾಪ್ ನಗರಗಳಲ್ಲಿ ಕರ್ನಾಟಕ ಸಹ ಒಂದು. ಕರ್ನಾಟಕದ ತಾಂತ್ರಿಕತೆಯಿಂದ ದೇಶ ಮುನ್ನಡೆಯಲಿದೆ. ಮುಂದಿನ 10 ವರ್ಷಗಳಲ್ಲಿ ಭಾರತ ಸೂಪರ್ ಪಾವರ್ ದೇಶವಾಗಲಿದೆ. ಯುವಶಕ್ತಿಯೇ ಭಾರತದ ಆಸ್ತಿಯಾಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ವಿ.ಆರ್.ದೇಶಪಾಂಡೆ ಅಭಿಪ್ರಾಯಪಚ್ಚರು. 
 
ನಾಳೆಯಿಂದ ಮೂರು ದಿನಗಳ ಕಾಲ ‘14 ನೇ 'ಭಾರತೀಯ ಪ್ರವಾಸಿ ದಿವಸ್’ ಸಮ್ಮೇಳನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.
 
ಇಂದಿನಿಂದ ಮೂರು ದಿನಗಳ ಕಾಲ 14 ನೇಯ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನ ರಾಜಧಾನಿ ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ