ಗುಪ್ಟಿಲ್ ಸ್ಫೋಟಕ ಬ್ಯಾಟಿಂಗ್: ಪಾಕ್ ವಿರುದ್ಧ ಗೆದ್ದ ಕಿವೀಸ್ ಸೆಮಿಫೈನಲ್‌ಗೆ

ಬುಧವಾರ, 23 ಮಾರ್ಚ್ 2016 (02:39 IST)
ಪಾಕಿಸ್ತಾನದ ಓಪನರ್ ಶಾರ್ಜೀಲ್ ಖಾನ್ ಬಿರುಸಿನ ರನ್ ಸಿಡಿಸುವುದನ್ನು ನೋಡಿ ಪಾಕಿಸ್ತಾನ ಪಾಳೆಯದಲ್ಲಿ ಭರವಸೆಯ ಮಿಂಚು ಹರಿದಿತ್ತು. ಶಾರ್ಜೀಲ್ ಖಾನ್ 25 ಎಸೆತಗಳಲ್ಲಿ 47 ರನ್ ಸಿಡಿಸಿದ್ದರು. ಪಾಕಿಸ್ತಾನ ಮೊದಲ ಓವರಿನಲ್ಲೇ 15 ರನ್ ಸಿಡಿಸಿತ್ತು. ನಾಲ್ಕನೇ ಓವರಿನಲ್ಲಿ 18 ರನ್ ಸಿಡಿಸಿತ್ತು. ಶಾರ್ಜೀಲ್ ಸತತ ಮೂರು  ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ್ದರು.

 ಆದರೆ ಶಾರ್ಜೀಲ್ ಔಟಾದ ಬಳಿಕ ಬ್ಲಾಕ್ ಕ್ಯಾಪ್ಸ್ ಶಿಸ್ತಿನ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಗೆಲುವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಕಿವೀಸ್ 180 ರನ್‌ಗಳಿಗೆ ಪ್ರತಿಯಾಗಿ ಪಾಕಿಸ್ತಾನ 5 ವಿಕೆಟ್‌ಗೆ 158 ರನ್ ಮಾತ್ರ ಗಳಿಸಿ 22 ರನ್‌ಗಳಿಂದ ಸೋಲಪ್ಪಿದೆ. ವಿಶ್ವ ಟಿ 20ಯಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನದ ವಿರುದ್ಧ ಈ ಗೆಲುವಿನ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಗ್ರೂಪ್‌ 2ರಲ್ಲಿ ಸತತ ಮೂರು ಜಯಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಸ್ಫೋಟಕ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ ರನ್‌ ಹೊಳೆಯನ್ನೇ ಹರಿಸಿದರು. 48 ಎಸೆತಗಳ ಅವರ 80 ರನ್‌ಗಳಲ್ಲಿ 10 ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ