ಈಶ್ವರಪ್ಪಗೆ ಟಾಂಗ್ ಕೊಡಲು ಯಡಿಯೂರಪ್ಪ ಮಾಸ್ಟರ್ ಪ್ಲಾನ್.. ಎಚ್. ವಿಶ್ವನಾಥ್ ಕರೆತರಲು ತಂತ್ರ..?

ಗುರುವಾರ, 27 ಏಪ್ರಿಲ್ 2017 (16:00 IST)
ಮಿಶನ್ 150 ಯೋಜನೆಯಲ್ಲಿರುವ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಮುಗಿಯುವ ಹಾಗೆ ಕಾಣುತ್ತಿಲ್ಲ. ಇವತ್ತು ಅರಮನೆ ಮೈದಾನದಲ್ಲಿ ಬಹಿರಂಗ ಸಭೆ ನಡೆಸಿರುವ ಅತೃಪ್ತ ನಾಯಕರು ಯಡಿಯೂರಪ್ಪ ವಿರುದ್ಧ ಬಹಿರಂಗ ಸಮರಕ್ಕೆ ನಿಂತಿದ್ದಾರೆ. ಕೂಡಲೇ ಪದಾಧಿಕಾರಿಗಳ ಸಮಸ್ಯೆ ಬಗೆಹರಿಸುವಂತೆ ಹೈಕಮಾಂಡ್`ಗೆ ಗಡುವು ಕೊಟ್ಟಿದ್ದಾರೆ.

ಈ ಮಧ್ಯೆ, ತಮ್ಮ ವಿರುದ್ಧ ಬಹಿರಂಗ ಸಭೆಯಲ್ಲಿ ಮಾತಿನ ದಾಳಿ ನಡೆಸಿರುವ ಈಶ್ವರಪ್ಪಗೆ ಟಾಂಗ್ ನೀಡಲು ಯಡಿಯೂರಪ್ಪ ಸಜ್ಜಾಗಿದ್ದಾರೆ. ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಹೈಕಮಾಂಡ್`ಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಈಶ್ವರಪ್ಪ ಬದಲಾಗಿ ಪಕ್ಷದಲ್ಲಿ ಪರ್ಯಾಯ ನಾಯಕನಿಗೆ ಬಿಎಸ್`ವೈ ಹುಡುಕಾಟ ನಡೆಸಿದ್ದಾರೆ ಎನ್ನುತ್ತಿವೆ ವರದಿಗಳು.

ಈಶ್ವರಪ್ಪನವರಿಗೆ ಟಾಂಗ್ ನೀಡಲು ಕಾಂಗ್ರೆಸ್`ನ ಮಾಜಿ ಸಂಸದ ಎಚ್. ವಿಶ್ವನಾಥ್ ಅವರನ್ನ ಪಕ್ಷಕ್ಕೆ ಕರೆತರಲು ಯಡಿಯೂರಪ್ಪ ಮುಂದಾಗಿದ್ದಾರೆ. ಈ ಬಗ್ಗೆ ಎಸ್.ಎಂ. ಕೃಷ್ಣ ಜೊತೆ ಮಾತನಾಡಿರುವ ಯಡಿಯೂರಪ್ಪ, ಎಚ್. ವಿಶ್ವನಾಥ್, ಈಶ್ವರಪ್ಪನವರಿಗಿಂತ ದೊಡ್ಡಮಟ್ಟದ ಕುರುಬರ ನಾಯಕ. ಅವರನ್ನ ಬಿಜೆಪಿ ಪಕ್ಷಕ್ಕೆ ಕರೆತರುವಂತೆ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಮಾತನಾಡಿ ತಿಳಿಸುವುದಾಗಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆಂದೂ ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ