ಬಿಜೆಪಿ ಮುಖಂಡರ ವಿರುದ್ಧವೇ ತಿರುಗಿ ಬಿದ್ದ ಯಡಿಯೂರಪ್ಪ

ಬುಧವಾರ, 27 ಆಗಸ್ಟ್ 2014 (15:12 IST)
ಶಿವಮೊಗ್ಗದ ಶಿಕಾರಿಪುರ ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರು ಸಹಕಾರ ನೀಡಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
 
ರಾಜ್ಯ ಮಟ್ಟದ ಬಿಜೆಪಿ ನಾಯಕರು ಶಿಕಾರಿಪುರ ಚುನಾವಣೆ ಸಂದರ್ಭದಲ್ಲಿ ವ್ಯವಸ್ಥಿತ ಪ್ರಚಾರ ಮಾಡದಿರುವುದರಿಂದ ನನ್ನ ಪುತ್ರನ ಗೆಲುವಿನ ಅಂತರದಲ್ಲಿ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ.
 
ಒಂದು ವೇಳೆ ಪಕ್ಷದ ಮುಖಂಡರು ಮನಸ್ಸಿನಿಂದ ಪ್ರಚಾರ ಮಾಡಿದ್ದಲ್ಲಿ ಗೆಲುವಿನ ಅಂತರ ಹೆಚ್ಚಾಗುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
 
 
 ವಿಧಾನಸಭೆ ಉಪ ಚುನಾವಣೆಯ ಸೋಲಿನ ಕುರಿತು ಇಂದು ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಗರಂ ಆಗಿರುವ ಯಡಿಯೂರಪ್ಪ, ಚುನಾವಣೆಗಾಗಿ ಬಿಜೆಪಿ ನಾಯಕರು ಸರಿಯಾಗಿ ಪ್ರಚಾರ ಮಾಡಲಿಲ್ಲ. ಸರಿಯಾಗಿ ಪ್ರಚಾರ ಮಾಡಿದ್ದರೆ, 2 ಕ್ಷೇತ್ರಗಳಲ್ಲಿ ಸೋಲುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
 
ಯಾವ ಸಂಸದರೂ ಪ್ರಚಾರಕ್ಕೆ ಬರಲಿಲ್ಲ. ಬಂದು ಪ್ರಚಾರ ಮಾಡಿದ್ದರೆ, ಶಿಕಾರಿಪುರದಲ್ಲಿ ಕಡಿಮೆ ಮತಗಳಲ್ಲಿ ಗೆಲ್ಲಬೇಕಾಗಿರಲಿಲ್ಲ ಎಂದ ಅವರು ಕಾಂಗ್ರೆಸ್ ತಂತ್ರಗಾರಿಕೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ.
 
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕೇವಲ ಒಂದು ಗೆಲುವು ಕಂಡ ಬಿಜೆಪಿ, ಬಿಜೆಪಿ ಭದ್ರಕೋಟೆ ಎಂದೇ ಬಿಂಬಿಸಲಾಗಿದ್ದು ಬಳ್ಳಾರಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದೆ ಸೋಲು ಕಂಡಿತ್ತು. ಇದರಿಂದ ಬಿಜೆಪಿ ಭದ್ರಕೋಟೆ ಮುರಿದ ಕಾಂಗ್ರೆಸ್ ಎಂಬ ಹೆಸರು ಬಂದಿತು.
 
ದೇಶಾದ್ಯಂತ ಮೋದಿ ಅಲೆ ಎಂದು ಹೇಳಾಲಾಗುತ್ತಿದ್ದರೂ, ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿರುವುದರ ಕುರಿತು ಚರ್ಚಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿರುವ ಬಿಜೆಪಿ ಮುಖಂಡರು ಸಭೆ ಸೇರಿದ್ದಾರೆ.

ವೆಬ್ದುನಿಯಾವನ್ನು ಓದಿ