ಯಡಿಯೂರಪ್ಪ ಜೆಡಿಎಸ್ ಸೇರುವವರಿದ್ದರು, ಆದ್ರೆ ಮಂತ್ರಿಗಿರಿ ನೀಡಲ್ಲ ಎಂದಿದ್ದೆ: ಕುಮಾರಸ್ವಾಮಿ

ಸೋಮವಾರ, 23 ಜನವರಿ 2017 (17:08 IST)
2005 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೆಡಿಎಸ್ ಸೇರಲು ಸಿದ್ಧವಾಗಿದ್ದರು. ಆದರೆ, ಅವರಿಗೆ ಮಂತ್ರಿಗಿರಿ ನೀಡಲು ಸಾಧ್ಯವಿಲ್ಲ ಎಂದಿದ್ದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಜೆಡಿಎಸ್ ಪಕ್ಷ ಸೇರ್ಪಡೆಯಾಗುವ ಸುದ್ದಿ ಊಹಾಪೋಹ. ಈಶ್ವರಪ್ಪ ಅವರನ್ನು ನಮ್ಮ ಪಕ್ಷದ ಯಾವುದೇ ಶಾಸಕರು ಭೇಟಿಯಾಗಿಲ್ಲ. ಆದರೆ, ಯಾಕೆ ಇಂತಹ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೋ ಗೊತ್ತಿಲ್ಲ ಎಂದರು.
 
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುತ್ತೇನೆ ಎಂದು ಹೇಳುವ ಬಿ.ಎಸ್.ಯಡಿಯೂರಪ್ಪ, 2005 ರಲ್ಲಿ ಜೆಡಿಎಸ್ ಪಕ್ಷ ಸೇರಲು ಮುಂದಾಗಿದ್ದರು. ಈ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಮಚಂದ್ರೇಗೌಡ ಬಂದು ಚರ್ಚೆ ನಡೆಸಿದ್ದರು. ಇಂತವರು ಈಶ್ವರಪ್ಪ ಅವರನ್ನು ಪಕ್ಷ ದ್ರೋಹಿ ಎನ್ನುತ್ತಿದ್ದಾರೆ. ಕೆಜೆಪಿ ಕಟ್ಟಿ ಬಿಎಸ್‌ವೈ ಮಾಡಿದ್ದೇನು? ಎಂದು ಖಾರವಾಗಿ ಪ್ರಶ್ನಿಸಿದರು.
 
ಈಶ್ವರಪ್ಪ ಅವರನ್ನು ಸೋಲಿಸಿದ್ದ ಅಭ್ಯರ್ಥಿಯನ್ನು ತಂದು ಬಿಎಸ್‌ವೈ ಶಿವಮೊಗ್ಗ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದನ್ನು ಸಹಿಸಲು ಹೇಗೆ ಸಾಧ್ಯ. ಈಶ್ವರಪ್ಪ ಅವರಿಗೆ ಸಹಜವಾಗಿಯೇ ನೋವಾಗಿರುತ್ತೆ ಎಂದು ಅಭಿಪ್ರಾಯಪಟ್ಟರು. 
 
2 ದಿನಗಳ ಕಾಲ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ಸಾರಾಂಶ ನೋಡಿದ್ರೆ ತಿಳಿಯುತ್ತೆ. ರಾಜ್ಯ ಬಿಜೆಪಿ ಘಟಕದಲ್ಲಿ ಯಡಿಯೂರಪ್ಪಗಿಂತ ಈಶ್ವರಪ್ಪ ಅವರೇ ಸ್ಟ್ರಾಂಗ್ ಎಂದು ಈಶ್ವರಪ್ಪ ಪರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ