ಯೋಗಿ, ಪ್ರಶಾಂತ್‌ಗೆ ಎಎಪಿಯಿಂದ ಕೊಕ್...?!

ಸೋಮವಾರ, 2 ಮಾರ್ಚ್ 2015 (14:16 IST)
ದೆಹಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಇತಿಹಾಸ ನಿರ್ಮಿಸಿದ್ದ ಎಎಪಿ ಪಕ್ಷದಲ್ಲಿ ಪ್ರಸ್ತುತ ಸದಸ್ಯರ ಮಧ್ಯೆ ಭಿನ್ನಮತ ಸ್ಫೋಟಗೊಂಡಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. 
 
ಹೌದು, ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಎಎಪಿಯಲ್ಲಿ ಪ್ರಸ್ತುತ ಸದಸ್ಯರ ನಡುವೆ ಭಿನ್ನಮತ ಸ್ಫೋಟಗೊಂಡಿದೆ ಎನ್ನಲಾಗುತ್ತಿದ್ದು, ಎಎಪಿ ಪಕ್ಷದ ಎಲ್ಲಾ ಚಟುವಟಿಕೆಗಳೂ ಕೂಡ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಕೇಂದ್ರೀಕೃತವಾಗಿರುತ್ತವೆ. ಅಲ್ಲದೆ ಅವರೇ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು, ಏಕಮುಖ ಪಕ್ಷವಾಗಿದೆ. ಇಲ್ಲಿ ಇತರರಿಗೆ ಅವಕಾಶವಿಲ್ಲ ಎಂಬ ಸುದ್ದಿಯೊಂದಿಗೆ ಪಕ್ಷದ ವಿರುದ್ಧ ಸಮರ ಸಾರುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ರಾಜಕೀಯ ಮುಕ್ತಿ ನೀಡಲು ಎಎಪಿ ನಿರ್ಧರಿಸಿದೆ ಎನ್ನಲಾಗುತ್ತಿದೆ. 
 
ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಸಿಯಿಸಿರುವ ಪಕ್ಷದ ಮತ್ತೋರ್ವ ಪ್ರಭಾವಿ ನಾಯಕ ಅಶುತೋಷ್, ನಮ್ಮ ಸದಸ್ಯರಲ್ಲಿ ನಡೆಯುವುದು ಐಡಿಯಾಗಳ ಸಮರವೇ ಹೊರತು ವ್ಯಕ್ತಿಗಳ ಸಮರವಲ್ಲ ಎನ್ನುವ ಮೂಲಕ ವಿಷಯವನ್ನು ಸಮರ್ಥಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ