ಸಂಬಳ ತಗೊಂಡು ಗಿಂಬಳ ಕೇಳೋಕೆ ನಾಚಿಕೆಯಾಗಲ್ವಾ: ಅಧಿಕಾರಿಗಳಿಗೆ ಲೋಕಾಯುಕ್ತರ ತರಾಟೆ

ಗುರುವಾರ, 21 ಮೇ 2015 (13:58 IST)
ಸಂಬಳ ತಗೊಂಡು ಗಿಂಬಳ ಕೇಳೋಕೆ ನಾಚಿಕೆ ಆಗಲ್ವಾ, ಈ ಜಿಲ್ಲೆಯಲ್ಲಿ ಯಾವುದೇ ಸಚಿವರು ಅಥವಾ ಜನಪ್ರತಿನಿಧಿಗಳಿಲ್ವಾ... ಛೀ ನಾಚಿಕೆಯಾಗ್ಬೇಕು. 
 
ರಾಜ್ಯದ ಉಪ ಲೋಕಾಯುಕ್ತ ಎಸ್.ಬಿ.ಮಜಗೆ ಅವರು ಇಂದು ಇಲ್ಲಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೇಳಿದ ನೇರ ನುಡಿಗಳಿವು. 
 
ಇಂದು ಬೆಳಗ್ಗೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತರು, ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಗರಂ ಆದು. ಈ ವೇಳೆ ಅಧಿಕಾರಿಗಳನ್ನು ಕೆಲ ಕಾಲ ತರಾಟೆಗೆ ತೆಗೆದುಕೊಂಡ ಅವರು, ಜಿಲ್ಲೆಯಲ್ಲಿ ಯಾವೊಬ್ಬ ಸಚಿವರೂ ಇಲ್ಲವೇ, ಆಸ್ಪತ್ರೆಗೆ ಯಾವತ್ತೂ ಭೇಟಿ ನೀಡಿಲ್ಲವೇ ಎಂದು ಗರಂ ಆದರು.
 
ಇದೇ ವೇಳೆ, ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದ ಅವರಿಗೆ ಕೆಲ ಸಾರ್ವಜನಿಕರು, ಆಸ್ಪತ್ರೆಯ ಸಿಬ್ಬಂದಿಗಳು ಚಿಕಿತ್ಸೆ ನೀಡಲು ತಮ್ಮಿಂದ ಸಾಕಷ್ಟು ಹಣವನ್ನು ಲಂಚರೂಪದಲ್ಲಿ ವಸೂಲು ಮಾಡುತ್ತಿದ್ದಾರೆ. ಇವರಿಗೆ ಹೇಳುವವರು ಕೇಳುವವರಿಲ್ಲದಂತಾಗಿದೆ ಎಂದು ದೂರು ನೀಡಿದರು. ಇದರಿಂದ ಕುಪಿತಗೊಂಡ ನ್ಯಾ. ಮಜಗೆ ಸರ್ಕಾರದಿಂದ ಸಂಬಳ ತಗೊಂಡ್ರೂ ಗಿಂಬಳ ಕೇಳೋಕೆ ನಿಮಗೆ ನಾಚಿಕೆಯಾಗೋದಿಲ್ಲವೇ, ಸರ್ಕಾರ ನಿಮ್ಮನ್ನು ನೇಮಕ ಮಾಡಿರುವುದು ಏಕೆ, ನಿಮ್ಮನ್ನು ಕೂರಿಸಿ ಕೂಳು ಹಾಕ್ಬೇಕಾ  ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಬಳಿಕ ನಾನು ಇದಕ್ಕೆ ಮೊದಲೇ ಆಸ್ಪತ್ರೆಗೆ ಬರಬೇಕಿತ್ತು. ಆದರೆ ಇಂದು ಭೇಟಿ ನೀಡಿದ್ದೇನೆ ಎಂದು ಪಶ್ಚಾತಾಪ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ