ಅತಂತ್ರ ಜಿಪಂಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರ

ಬುಧವಾರ, 24 ಫೆಬ್ರವರಿ 2016 (15:06 IST)
ಅತಂತ್ರವಾಗಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಆಯಾ ಜಿಲ್ಲೆಗಳ ನಾಯಕರಿಗೆ ರಾಜ್ಯ ನಾಯಕರು ಸೂಚನೆ ನೀಡಿದ್ದಾರೆ.
 
ಆಯಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಜೆಡಿಎಸ್ ಮುಖಂಡರೊಂದಿಗೆ ಮೈತ್ರಿ ಕುರಿತಂತೆ ಚರ್ಚಿಸಿ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸಿ ಎಂದು ಬಿಜೆಪಿ ಮುಖಂಡರು ಜಿಲ್ಲಾಧ್ಯಕ್ಷರುಗಳಿಗೆ ಸಲಹೆ ನೀಡಿದ್ದಾರೆ.
 
ರಾಜ್ಯಮಟ್ಟದಲ್ಲಿ ಜೆಡಿಎಸ್‌ನೊಂದಿಗೆ ಚರ್ಚೆ ನಡೆಸುವ ಅಗತ್ಯವಿಲ್ಲ. ಜಿಲ್ಲಾಮಟ್ಟದ ನಾಯಕರುಗಳು ಜೆಡಿಎಸ್‌ ಪಕ್ಷದೊಂದಿಗಿನ ಮೈತ್ರಿ ನಿರ್ಧರಿಸುತ್ತಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
 
ರಾಜ್ಯದಲ್ಲಿ ಅತಂತ್ರವಾಗಿರುವ ಎಂಟು ಜಿಲ್ಲಾ ಪಂಚಾಯಿತಿಗಳಲ್ಲಿ ಅಧಿಕಾರದ ಗದ್ದುಗೆ ಅಲಂಕರಿಸಲು ಜೆಡಿಎಸ್‌ ಪಕ್ಷದೊಂದಿಗಿನ ಮೈತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಅನಿವಾರ್ಯವಾಗಿದೆ.
 

ವೆಬ್ದುನಿಯಾವನ್ನು ಓದಿ