ಆಮ್ ಆದ್ಮಿ ಪಕ್ಷದ 20 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಶುಕ್ರವಾರ, 14 ಮಾರ್ಚ್ 2014 (15:55 IST)
PR
ದೆಹಲಿ ಸರ್ಕಾರಕ್ಕೆ ರಾಜೀನಾಮೆ ನೀಡಿದ ಎರಡು ದಿನಗಳಲ್ಲೇ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮುಂಬರುವ ಲೋಕಸಭೆ ಚುನಾವಣೆ ಮೇಲೆ ತನ್ನ ಗಮನಹರಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಟಾಂಗ್ ನೀಡಲು ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪಕ್ಷ 20 ಅಭ್ಯರ್ಥಿಗಳ ಹೆಸರಿನ ಮೊದಲ ಪಟ್ಟಿಯನ್ನು ಅಂತಿಮಗೊಳಿಸಿದೆ. ಮಾಜಿ ಪತ್ರಕರ್ತ ಮತ್ತು ಎಎಪಿ ವಕ್ತಾರ ಅಶುತೋಷ್ ಕೇಂದ್ರ ಸಚಿವ ಕಪಿಲ್ ಸಿಬಲ್ ವಿರುದ್ಧ ದೆಹಲಿಯ ಚಾಂದ್ನಿ ಚೌಕ್ ಸ್ಥಾನಕ್ಕೆ ಸ್ಫರ್ಧಿಸುವುದನ್ನು ಪ್ರಕಟಿಸಿದೆ. ಮುಕುಲ್ ತ್ರಿಪಾಠಿ ಅವರು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ವಿರುದ್ಧ ಫರುಕಾಬಾದ್ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ.

ಹಿರಿಯ ವಕೀಲ ಎಚ್.ಎಸ್. ಫೂಲ್ಕಾ ಲೂಧಿಯಾನಾದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ವಿರುದ್ಧ ಕಣಕ್ಕಿಳಿಯಲಿದ್ದಾರೆ.ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಮುಂಬೈ ಈಶಾನ್ಯದಿಂದ ಕಣಕ್ಕಿಳಿಯಲಿದ್ದು, ಯೋಗೇಂದ್ರ ಯಾದವ್ ಗುರಗಾಂವ್‌ನಿಂದ ಸ್ಪರ್ಧಿಸಲಿದ್ದಾರೆ.ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಬಳಿಕ ಪಟ್ಟಿಯನ್ನು ಪ್ರಕಟಿಸಿದ ಎಎಪಿಯ ಮನೀಷ್ ಸಿಸೋಡಿಯಾ, ಅಂಜಲಿ ಡಮಾನಿಯಾ ನಿತಿನ್ ಗಡ್ಕರಿ ವಿರುದ್ಧ ನಾಗ್ಪುರದಲ್ಲಿ ಸ್ಪರ್ಧಿಸಲಿದ್ದಾರೆ. ಕುಮಾರ್ ವಿಶ್ವಾಸ್ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಕೇಜ್ರಿವಾಲ್ ಅವರ ಆಮ್ ಆದ್ಮ ಪಕ್ಷ ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಫಲಿತಾಂಶ ನೀಡಿದ ಬಳಿಕ ಈಗ ಅನೇಕ ಮಂದಿ ಲೋಕಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯನ್ನು ಕಂಡಿದ್ದಾರೆ. ಚುನಾವಣೆಯಲ್ಲಿ 350 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಎಎಪಿ ತಿಳಿಸಿದ್ದು, ಕೇಜ್ರಿವಾಲ್ ಅವರನ್ನು ಉನ್ನತ ಹುದ್ದೆಗೆ ಕಣಕ್ಕಿಳಿಸಲಿದೆ.

ವೆಬ್ದುನಿಯಾವನ್ನು ಓದಿ