ಮುಂಬೈ : ಕೇಜ್ರಿವಾಲ್‌ನನ್ನು ಕರೆದೊಯ್ದ ಆಟೋ ಚಾಲಕನಿಗೆ ದಂಡ

ಶುಕ್ರವಾರ, 14 ಮಾರ್ಚ್ 2014 (17:36 IST)
PR
ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಹಚರರನ್ನು ಬುಧವಾರ ವಿಮಾನನಿಲ್ದಾಣದಿಂದ ಉಪನಗರ ಅಂಧೇರಿ ರೈಲು ನಿಲ್ದಾಣಕ್ಕೆ ತಮ್ಮ ಆಟೋದಲ್ಲಿ ಕರೆದುಕೊಂಡು ಹೋದ ರಿಕ್ಷಾ ಚಾಲಕನ ಮೇಲೆ ಮೂರು ಪ್ರಯಾಣಿಕರನ್ನು ಹೊತ್ತೊಯ್ದು, ಮೋಟಾರ್ ವಾಹನ ಕಾಯಿದೆಯನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಪೊಲೀಸರು ದಂಡವನ್ನು ವಸೂಲಿ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಐದು ಕಿಮೀ ದೂರದ ದಕ್ಷಿಣ ಮುಂಬೈ ಚರ್ಚ್ ಗೇಟ್ ರೈಲು ನಿಲ್ದಾಣ ತಲುಪಲು ಕೇಜ್ರಿವಾಲ್ ಸ್ಥಳೀಯ ಆಟೋವನ್ನು ತೆಗೆದುಕೊಂಡಿದ್ದರು.

ಆಟೋದಲ್ಲಿ ಮೂರಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತುಕೊಂಡು ಹೋಗಿದ್ದಕ್ಕಾಗಿ ಚಾಲಕನಿಗೆ ದಂಡ ವಿಧಿಸಲಾಯಿತು ಎಂದು ಹೆಚ್ಚಿವರಿ ಪೋಲಿಸ್ ಆಯುಕ್ತ ಕೈಸರ್ ಖಾಲಿದ್ ಹೇಳಿದ್ದಾರೆ.

"ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಆಗಿರುವುದರಿಂದ, ನಾವು ರಿಕ್ಷಾ ಚಾಲಕನ ವಿರುದ್ಧ ಕ್ರಮ ತೆಗೆದುಕೊಂಡೆವು ಮತ್ತು ಅದಕ್ಕನುಸಾರವಾಗಿ ಅವನಿಗೆ ದಂಡ ವಿಧಿಸಿದೆವು " ಎಂದು ಖಾಲಿದ್ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಪೊಲೀಸ್ ಅದೇ ಕಾಯಿದೆಯಡಿಯಲ್ಲಿ ಕೇಜ್ರಿವಾಲ್ ಅವರ ಬೆಂಗಾವಲು ಭಾಗವಾಗಿ ಹೋದ ಆಟೋಗಳಿಂದಲೂ ದಂಡ ವಸೂಲಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ