ಕೋಮುವಾದದ ಮುಖವಾಡ ತೊಟ್ಟ ನರೇಂದ್ರ ಮೋದಿ: ಮಮತಾ ಕಿಡಿ

ಶುಕ್ರವಾರ, 14 ಮಾರ್ಚ್ 2014 (17:36 IST)
PR
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೋಮುವಾದಿ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮಾ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ದೆಹಲಿಯ ರಾಮಲೀಲಾ ಮೈದಾನಲ್ಲಿ ಕೈಗೊಂಡಿದ್ದ ರ್ಯಾಲಿಯಲ್ಲಿ ಗುಜರಾತ್ ನಾಯಕ ಮೋದಿ ಕೋಮುವಾದದ ಮುಖವಾಡ ತೊಟ್ಟಿದ್ದಾರೆ ಎಂದು ಮಮತಾ ಕಿಡಿಕಾರಿದ್ದಾರೆ.

ಮಮತಾ ಬ್ಯಾನರ್ಜಿ ಅವರು ದೆಹಲಿಯ ರಾಮಲೀಲಾ ಮೈದಾನಲ್ಲಿ ಕೈಗೊಂಡಿದ್ದ ರ್ಯಾಲಿಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮಾ ಬಂಗಳಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅಣ್ಣಾ ಹಜಾರೆ ಅವರು ಬೆಂಬಲಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅನಾರೋಗ್ಯದ ಹಿನ್ನಲೆಯಲ್ಲಿ ಅಣ್ಣಾ ಹಜಾರೆ ಇಂದು ದೀದಿ ರ್ಯಾಲಿ ಹಾಜರಾಗಿಲ್ಲ ಎಂದು ಹೇಳಾಲಾಗುತ್ತಿದೆ.

ರ್ಯಾಲಿಯಲ್ಲಿ ಭಾಷಣ ಮಾಡಿದ ಮಮತಾ ಬ್ಯಾನರ್ಜಿ, ನಾವು ಪ್ರಾರಂಭಿಸಿರುವ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಇದಕ್ಕೆ ಯಾರು ಸಹಾಕಾರ ನೀಡದೇ ಹೋದರು, ಹೋರಾಟ ಬಿಡುವುದಿಲ್ಲ ಎಂದು ಪರೋಕ್ಷವಾಗಿ ಅಣ್ಣಾ ಗೈರು ಆಗಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ರ್ಯಾಲಿಯಲ್ಲಿ ಭಾಗವಹಿಸಲೆಂದೇ ನಾನು ನನ್ನ ಕೆಲಸಗಳನ್ನು ಬಿಟ್ಟು ಬಂದಿದ್ದೇನೆ. ಹಾಗಾಗಿ ಇಲ್ಲಿ ನಾನು ಯಾರ ಬೆಂಬಲಕ್ಕೂ ಕಾಯುತ್ತಿಲ್ಲ. ಪಕ್ಷವನ್ನು ಗಟ್ಟಿಗೊಳಿಸುವುದೇ ನನ್ನ ಉದ್ದೇಶವಾಗಿದೆ. ಉತ್ತರಪ್ರದೇಶ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ಟಿಎಂಸಿ ರ್ಯಾಲಿ ನಡೆಸಲಿದೆ ಎಂದು ಮಮತಾ ಹೇಳಿದ್ದಾರೆ.

ಗಾಂಧಿವಾದಿ ಅಣ್ಣಾ ಹಜಾರೆ ಅವರು ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅವರಿಗೆ ಬೆಂಬಲ ಘೋಷಿಸಿದ್ದರು. ಮಮತಾ ಅವರು ದೇಶದ ಮುಂದಿನ ಪ್ರಧಾನಿಯಾಗಲಿ ಎಂದು ಹೇಳಿದ್ದರು.

ಲೋಕಸಭೆ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಅಣ್ಣಾ ಘೋಷಿಸಿದ್ದರು. ಆದರೆ ಇಂದು ದೆಹಲಿಯಲ್ಲಿ ನಡೆದ ಮಮತಾ ನೇತೃತ್ವದ ರ್ಯಾಲಿಗೆ ಗೈರಾಗಿರುವುದು ಹಲವಾರು ಅನುಮಾನಗಳನ್ನು ಹುಟ್ಟಿಹಾಕಿದೆ.

ವೆಬ್ದುನಿಯಾವನ್ನು ಓದಿ