ಕೇಜ್ರಿವಾಲ್ ಆಯ್ಕೆ ಮೋದಿಯಂತೆ...

ಶುಕ್ರವಾರ, 14 ಮಾರ್ಚ್ 2014 (17:18 IST)
PR
ಕಳೆದ ಬುಧವಾರ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಆಪ್ ನಾಯಕ ಕೇಜ್ರಿವಾಲ್ 'ಪ್ರಧಾನಮಂತ್ರಿ ಸ್ಥಾನಕ್ಕೆ ನರೇಂದ್ರ ಮೋದಿ ಮತ್ತು ಮಾಯಾವತಿ ಇವರಿಬ್ಬರನ್ನು ಗಣನೆಗೆ ತಂದುಕೊಂಡರೆ ತಮ್ಮ ಆಯ್ಕೆ ನರೇಂದ್ರ ಮೋದಿ' ಎಂದು ಹೇಳಿದ್ದಾರೆ.

ಎಕನಾಮಿಕ್ಸ್ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಮುಂಬೈನಲ್ಲಿ ನಿಧಿ ನಿರ್ವಾಹಕರು ಮತ್ತು ಷೇರು ದಲ್ಲಾಳಿಗಳ ಜತೆಗಿನ ಭೇಟಿಯಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್ ತುಂಬ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಧಾನಿ ಹುದ್ದೆಗೆ ತಾನು ಮೋದಿಯನ್ನೇ ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅನಿಲ್ ಸಿಂಘವಿ ಎನ್ನುವವರು ಕ್ರೇಜಿವಾಲ್ ರಲ್ಲಿ "ಪ್ರಧಾನಮಂತ್ರಿ ಪದದ ಆಕಾಂಕ್ಷಿಗಳಾದ ಮೋದಿ ಮತ್ತು ಮಾಯಾವತಿ ಇವರಿಬ್ಬರಲ್ಲಿ ನಿಮ್ಮ ಆಯ್ಕೆ ಯಾವುದೆಂದು" ಕೇಳಿದಾಗ ಪ್ರಾರಂಭದಲ್ಲಿ ಆಪ್ ನಾಯಕ ಇವರೀರ್ವರಲ್ಲಿ ಯಾರನ್ನೂ ಸಹ ನಾನು ಆ ಸ್ಥಾನದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ದೇಶಕ್ಕೆ ಪ್ರಧಾನಮಂತ್ರಿ ಆಯ್ಕೆ ಮಾಡಲೇಬೇಕಲ್ಲ ಎಂದು ಹೇಳಿದಾಗ ತುಂಬ ಅನಿವಾರ್ಯ ಪರಿಸ್ಥಿತಿಯಲ್ಲಿ ಮೋದಿಯನ್ನೇ ಆಯ್ಕೆ ಮಾಡುತ್ತೇನೆ ಎಂದು ಹೇಳಿದರು.

ಆದರೆ ಮೋದಿಯನ್ನೇ ಏಕೆ ಆಯ್ಕೆ ಮಾಡುತ್ತಿರಿ? ಎಂಬುದಕ್ಕೆ ಅವರು ಯಾವುದೇ ಕಾರಣವನ್ನು ನೀಡಲು ನಿರಾಕರಿಸಿದರು.

"ನೀವು ನನ್ನ ತಲೆಗೆ ಒಂದು ಗನ್ ಇಟ್ಟು ಮಾಯಾವತಿ ಮತ್ತು ಮೋದಿ ಇವರಿಬ್ಬರಲ್ಲಿ ಯಾರನ್ನಾದರೂ ಆಯ್ಕೆ ಮಾಡಿ ಎಂದರೆ ನನ್ನ ಒಲವು ಮೋದಿ ಕಡೆ ಇರುತ್ತದೆ" ಎಂದು ಆಪ್ ನಾಯಕ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ