ಆಸ್ಸಾಂ: ರಾಜ್ಯಸಭೆಗೆ ಪ್ರಧಾನಿ ನಾಮಪತ್ರ ಸಲ್ಲಿಕೆ

ಬುಧವಾರ, 15 ಮೇ 2013 (17:37 IST)
PTI
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು 5ನೇ ಬಾರಿಗೆ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಧಾನ ಮಂತ್ರಿ ಮೇಲ್ಮನೆ ಅವಧಿ ಜೂನ್ 14ರಂದು ಮುಗಿಯಲಿದ್ದು, ರಾಜ್ಯ ಸಭಾ ಚುನಾವಣೆ ಮೇ 30 ರಂದು ನಡೆಯಲಿದೆ. ಚುನಾವಣೆ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಮೇ 20ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ಕಾಂಗ್ರೆಸ್ ಶಾಸಾಕಾಂಗ ಪಕ್ಷದ ಸಭೆ ನಡೆಸಲಾಗಿದ್ದು, 80 ವರ್ಷದ ಮನಮೋಹನ್ ಸಿಂಗ್ ಅವರು ಶಾಸಕಾಂಗದ ಕಾರ್ಯದರ್ಶಿ ಜಿ.ಪಿ ದಾಸ್ ಅವರಿಗೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗಯ್, ಅಸ್ಸಾಂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಭುಬನೇಶ್ವರ್ ಕಲಿತಾ ಹಾಗೂ ಸಚಿವರಾದ ಪ್ರದ್ಯುತ್ ಬೋದೋಲಾಯ್, ರಾಕಿಬುಲ್ ಹುಸ್ಸೇನ್, ನೀಲ್‌ಮಣಿ ಸೇನ್ ದೇಖಾ ಮತ್ತು ಹಿಮಂತಾ ಬಿಸ್ವಾ ಶರ್ಮಾ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿ ಮನಮೋಹನ್ ಸಿಂಗ್ ನಾಮಪತ್ರ ಸಲ್ಲಿಸಿದ್ದಾರೆ

ನಾಮಪತ್ರ ಸಲ್ಲಿಸುವ ವೇಳೆ ಮಾದ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಈ ಹಿನ್ನಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೆಲ ಘಂಟೆಗಳ ಕಾಲ ರಾಜ್ಯಸಭಾದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ