ಇದೀಗ, ವಿವಾಹ ನೋಂದಣಿ ಕಡ್ಡಾಯ ಪ್ರಸ್ತಾವನೆಗೆ ಅಸ್ತು

ಗುರುವಾರ, 12 ಏಪ್ರಿಲ್ 2012 (16:48 IST)
PTI
ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.

ವಿವಾಹ ನೋಂದಣಿ ಕಾಯ್ದೆ ಕಡ್ಡಾಯಗೊಳಿಸುವ ಪ್ರಸ್ತಾವನೆಯಲ್ಲಿ ಕೆಲ ತಿದ್ದುಪಡಿಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದರಿಂದ ಅಂತರಜಾತಿ ಮದುವೆ ನೋಂದಣಿಗೆ ಸುಲಭವಾಗಲಿದೆ.

ಸರಕಾರದ ಪ್ರಸ್ತಾವನೆಯಿಂದ ಸಿಖ್, ಜೈನರು ಮತ್ತು ಬೌದ್ಧ ಧರ್ಮಿಯರಿಗೆ ಹಿಂದೂ ಕಾಯ್ದೆ ಪ್ರಕಾರ ವಿವಾಹ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಕೇಂದ್ರ ಸಚಿವ ಕಪಿಲ್ ಸಿಬಲ್ ಮಾತನಾಡಿ, ಸಿಖ್ ಸಮುದಾಯದವರು ಹಿಂದು, ವಿವಾಹ ಕಾಯ್ದೆಯನ್ನು ಪಾಲಿಸಬೇಕು ಎನ್ನುವ ಕಡ್ಡಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ