'ಇನ್ನಷ್ಟು ಶಾರ್ಟ್ ಸರ್ಕ್ಯೂಟ್ ಎದುರಿಸಲು ಸಿದ್ದರಾಗಿರಿ'

ಶುಕ್ರವಾರ, 28 ಫೆಬ್ರವರಿ 2014 (09:54 IST)
PR
PR
'ಪಾಟ್ನಾ: ಆರ್‌ಜೆಡಿ ಶಿಬಿರರಲ್ಲಿ ಬಂಡಾಯವನ್ನು ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಲಾಲು ಪ್ರಸಾದ್ ಮನೆಯಲ್ಲಿ ಬೆಂಕಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣ್ಣಿಸಿದ್ದಾರೆ. ಇಂತಹ ಘಟನೆಗಳನ್ನು ಇನ್ನಷ್ಟು ಎದುರಿಸಲು ಸಿದ್ಧರಾಗಿರಿ ಎಂದು ನಿತೀಶ್ ಹೇಳಿದ್ದಾರೆ.ನಿಮ್ಮ ಮನೆಯಲ್ಲಿ ಇನ್ನಷ್ಟು ಶಾರ್ಟ್ ಸರ್ಕ್ಯೂಟ್‌ಗಳಿಗೆ ಸಿದ್ಧವಾಗಿರಿ, ನಿಮ್ಮ ವೈರ್ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು ಎಂದು ಪಾಟ್ನಾದಲ್ಲಿ ವರದಿಗಾರರ ಜತೆ ಮಾತನಾಡುವಾಗ ನಿತೀಶ್ ತಿಳಿಸಿದರು. ಕಳೆದ ಫೆ.24ರಂದು 13 ಆರ್‌ಜೆಡಿ ಶಾಸಕರು ಪಕ್ಷವನ್ನು ತ್ಯಜಿಸುವುದಾಗಿ ಪ್ರಕಟಿಸಿದರು.

ನಂತರ ಅವರ ಪೈಕಿ 9 ಮಂದಿ ತಾವು ಒಡೆದ ಬಣದಲ್ಲಿ ಇಲ್ಲವೆಂದು ತಿಳಿಸಿದ್ದರು. ಇದು ವಾಸ್ತವವಾಗಿ ಲಾಲು ಮನೆಯಲ್ಲಿನ ಬೆಂಕಿಯಾಗಿದ್ದು, ಹೊರಗಿನವರ ಮೇಲೆ ತಪ್ಪಾಗಿ ಆರೋಪಿಸಿದ್ದಾರೆ ಎಂದು ಕುಮಾರ್ ಹೇಳಿದರು.ನೀವು ಟ್ರಾನ್ಸ್‌ಫಾರ್ಮರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, ಈ ಪ್ರಕರಣದಲ್ಲಿ ಟ್ರಾನ್ಸ್‌ಫಾರ್ಮರ್ ಸಮಸ್ಯೆಯಿಲ್ಲ.

ಆದರೆ ಇದು ಶಾರ್ಟ್‌ಸರ್ಕ್ಯೂಟ್‌ನಿಂದ ಉಂಟಾಗಿದೆ. ಆದರೆ ಅನೇಕ ಮನೆಗಳಲ್ಲಿ ಟ್ರಾನ್ಸ್‌ಫಾರ್ಮರ್ ಶಾರ್ಟ್‌ಸರ್ಕ್ಯೂಟ್‌ಗಳನ್ನು ಉಂಟುಮಾಡಬಹುದು ಎಂದು ನುಡಿದರು.ತಮ್ಮ ಪಕ್ಷದ ಮುಖಂಡರನ್ನು ಬೇಟೆಯಾಡುತ್ತಿದ್ದಾರೆಂದು ಲಾಲೂ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಚುನಾವಣೆ ಸಂದರ್ಭದಲ್ಲಿ ಅದು ಸಾಮಾನ್ಯವಾಗಿದ್ದು, ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ, ಬದಲಿಗೆ ಎದೆಬಡಿದುಕೊಂಡು ಬೇರೆಯವರ ಮೇಲೆ ಗೂಬೆ ಕೂರಿಸಬೇಡಿ ಎಂದು ಟೀಕಿಸಿದರು.ಲಾಲೂ ಅಸೆಂಬ್ಲಿ ಸ್ಪೀಕರ್ ಕ್ರಮದ ವಿರುದ್ಧ ಪ್ರತಿಭಟಿಸಲು ರೌಡಿಸಂನಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.13 ಶಾಸಕರನ್ನು ಪ್ರತ್ಯೇಕ ಗುಂಪಾಗಿ ಸ್ಪೀಕರ್ ಮಾನ್ಯತೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ