ಎನ್‌ಡಿಎ ಕಮ್‌ಬ್ಯಾಕ್, ಯುಪಿಎ ಧೂಳೀಪಟ: ಸಮೀಕ್ಷೆಯಲ್ಲಿ ಬಯಲು

ಶನಿವಾರ, 25 ಜನವರಿ 2014 (11:54 IST)
PR
PR
ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆ ಚುನಾವಣೆಯಲ್ಲಿ ಪರಿಣಾಮಕಾರಿ 211-231 ಸ್ಥಾನಗಳನ್ನು ಪಡೆದು ಕಮ್ ಬ್ಯಾಕ್ ಆಗುವ ನಿರೀಕ್ಷೆಯಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 100ಕ್ಕೂ ಹೆಚ್ಚು ಸೀಟುಗಳನ್ನು ಕಳೆದುಕೊಳ್ಳುತ್ತದೆಂದು ಬಿಂಬಿಸಲಾಗಿದೆ.ಸಿಎನ್‌ಎನ್-ಐಬಿನ್-ಲೋಕನೀತಿ-ಸಿಎಸ್‌ಡಿಎಸ್ ರಾಷ್ಟ್ರೀಯ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಸಾರಥ್ಯದ ಬಿಜೆಪಿ ಭಾರೀ ಜಯದತ್ತ ದಾಪುಗಾಲ ಹಾಕಲಿದ್ದು, ಕಾಂಗ್ರೆಸ್ ಅನೇಕ ಭಾಗಗಳಲ್ಲಿ ಧೂಳೀಪಟವಾಗಲಿದೆ. ಆಂಧ್ರ, ತಮಿಳುನಾಡು, ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ.ಜನವರಿ ಮೊದಲ ಎರಡು ವಾರಗಳಲ್ಲಿ ಭಾರತದ 18 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.

ರಾಷ್ಟ್ರೀಯ ಪ್ರೊಜೆಕ್ಷನ್
ಎನ್‌ಡಿಎ (ಬಿಜೆಪಿ + ಶಿವಸೇನೆ + ಶಿರೋಮಣಿ ಅಕಾಲಿ ದಳ್) - 211-231.
ಯುಪಿಎ (ಕಾಂಗ್ರೆಸ್ + ಎನ್‌ಸಿಪಿ + ಕೇರಳ ಮೈತ್ರಿಕೂಟ + ಜೆಎಂಎಂ) - 107-127 ,ತೃಣಮೂಲ ಕಾಂಗ್ರೆಸ್ (ಟಿಎಂಸಿ) - 20-28 , ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) - 15-23, ಎಡರಂಗ- 15-23 ವೈಎಸ್‌ಆರ್ ಕಾಂಗ್ರೆಸ್ ಪಕ್ಷ- 11-19, ಬಿಜು ಜನತಾ ದಳ (ಬಿಜೆಡಿ) - 10-16, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) - 10-16 , ತೆಲುಗು ದೇಶಂ ಪಕ್ಷ(ಟಿಡಿಪಿ) - 9-15,

PR
PR
ಸಮಾಜವಾದಿ ಪಕ್ಷ(ಎಸ್‌ಪಿ) - 8-14, ಜನತಾ ದಳ ಸಂಯುಕ್ತ (ಜೆಡಿಯು) - 7-13 ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) - 7-13
ಆಮ್ ಆದ್ಮಿ ಪಕ್ಷ (ಎಎಪಿ) - 6-12 , ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) - 6-10, ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) - 4-8, ಜನತಾ ದಳ ಜಾತ್ಯತೀತ(ಜೆಡಿಎಸ್) - 4-8
ಸಮೀಕ್ಷೆ ಪ್ರಕಾರ, ಒಟ್ಟು ಶೇ. 27 ಮತದಾರರು ತಾವು ಕಾಂಗ್ರೆಸ್‌ಗೆ ಓಟು ಮಾಡುವುದಾಗಿ ಹೇಳಿದ್ದಾರೆ. ಶೇ.34 ಜನರು ಬಿಜೆಪಿಗೆ ಓಟು ಮಾಡುವುದನ್ನು ಬಯಸಿದ್ದಾರೆ. 2014ರ ಜನವರಿಯಲ್ಲಿ ಚುನಾವಣೆ ನಡೆದರೆ, ಯುಪಿಎ ಶೇ. 28, ಎನ್‌ಡಿಎ ಶೇ. 36 ಪಡೆಯುವ ನಿರೀಕ್ಷೆ, ಉಳಿದವರು ಶೇ. 36 ಓಟು ಪಡೆಯುವುದೆಂದು ನಿರೀಕ್ಷಿಸಲಾಗಿದೆ. ಸಮೀಕ್ಷೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಭದ್ರ ನೆಲೆಯನ್ನು ಕಳೆದುಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಫಲಿತಾಂಶ ನೀಡುತ್ತಿದ್ದ ಕಾಂಗ್ರೆಸ್‌ಗೆ ಇದು ಆಘಾತಕಾರಿಯಾಗಿದೆ.

ವೆಬ್ದುನಿಯಾವನ್ನು ಓದಿ