ಕೇಜ್ರಿವಾಲ್ ಶನಿವಾರ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ

ಬುಧವಾರ, 25 ಡಿಸೆಂಬರ್ 2013 (16:56 IST)
PR
PR
ನವದೆಹಲಿ: ಭ್ರಷ್ಟಾಚಾರವನ್ನು ಗುಡಿಸಿ ಹಾಕುವ ಸಂಕಲ್ಪದೊಂದಿಗೆ ದೆಹಲಿ ಅಧಿಕಾರದ ಗದ್ದುಗೆ ಏರಿರುವ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ರಾಮಲೀಲಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇಜ್ರಿವಾಲ್ ಅವರ ನೂತನವಾಗಿ ಆಯ್ಕೆಯಾದ 6 ಮಂದಿ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಕೇಜ್ರಿವಾಲ್ ಅವರು ಯುವದಂಡಿಗೆ ಸಾರಥ್ಯ ವಹಿಸಲಿದ್ದು, ಅವರ ಪರಮಾಪ್ತ ಮನಿಷ್ ಸಿಸೋಡಿಯಾ ಪ್ರಮುಖ ಖಾತೆ ಪಡೆಯುವ ನಿರೀಕ್ಷೆಯಿದೆ. 26 ವರ್ಷ ವಯಸ್ಸಿನ ರಾಖಿ ಬಿರ್ಲಾ ಅತಿ ಕಿರಿಯ ವಯಸ್ಸಿನ ಸಂಪುಟ ಸದಸ್ಯರಾಗಿದ್ದಾರೆ.ನಿನ್ನೆ ಎಎಪಿಯಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ವಿನೋದ್ ಕುಮಾರ್ ಬಿನ್ನಿ ಬಂಡಾಯವೆದ್ದಾಗ, ಎಎಪಿ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಿತು.

ಕಿರಣ್ ಬೇಡಿ, ಸಂತೋಷ್ ಹೆಗ್ಡೆ ಮುಂತಾದವರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಶನಿವಾರ ಮಧ್ಯಾಹ್ನ 12.30ಕ್ಕೆ ಈ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಭ್ರಷ್ಟಾಚಾರ ಹೋರಾಟಕ್ಕೆ ತಮ್ಮೊಂದಿಗೆ ಸಾಥ್ ನೀಡಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಕೂಡ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ವೆಬ್ದುನಿಯಾವನ್ನು ಓದಿ