ಕೊನೆಯ ಕ್ಯಾಬಿನೆಟ್ ಸಭೆ: ಭ್ರಷ್ಟಾಚಾರ ನಿಗ್ರಹ ಮಸೂದೆಗೆ ಸುಗ್ರೀವಾಜ್ಞೆ ಸಾಧ್ಯತೆ

ಶುಕ್ರವಾರ, 28 ಫೆಬ್ರವರಿ 2014 (10:49 IST)
PR
PR
ನವದೆಹಲಿ: ಯುಪಿಎ ಎರಡನೇ ಸರ್ಕಾರದ ಕೊನೆಯ ಕ್ಯಾಬಿನೆಟ್ ಮೀಟಿಂಗ್ ಇಂದು ನಡೆಯುತ್ತಿದ್ದು,ಸಂಪುಟ ಸಭೆಯಲ್ಲಿ ಹಲವು ಜನಪ್ರಿಯ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಪಾಸಾಗದೇ ಉಳಿದಿರುವ ಭ್ರಷ್ಟಾಚಾರ ನಿಗ್ರಹ ಮಸೂದೆಗೆ ಅನುಮೋದನೆ ಸಿಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿವಯಸ್ಸು 60ರಿಂದ 62ಕ್ಕೆ ಹೆಚ್ಚಳವಾಗುವ ನಿರೀಕ್ಷೆಯಿದೆ. ರಾಹುಲ್ ಹೇಳಿರುವ ಪ್ರಮುಖ ಭ್ರಷ್ಟಾಚಾರ ನಿಗ್ರಹ 4 ಮಸೂದೆಗಳಿಗೆ ಸುಗ್ರೀವಾಜ್ಞೆ ರೂಪದಲ್ಲಿ ಅನುಮೋದಿಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ವೆಚ್ಚದ ಮಿತಿ 40ರಿಂದ 60 ಲಕ್ಷಕ್ಕೆ ಏರಿಸುವ ಸಾಧ್ಯತೆಯಿದೆ.

ಮೂರನೇ ಅನುಕ್ರಮ ಅವಧಿಯಲ್ಲಿ ಪುನಃ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸ ಹೊಂದಿರುವ ಯುಪಿಎ ನೌಕರರ ಪಿಂಚಣಿ ಯೋಜನೆಯ ಎಲ್ಲ ಸದಸ್ಯರಿಗೆ ಕನಿಷ್ಠ 1000 ರೂ. ಪಿಂಚಣಿಗೆ ಅನುಮೋದನೆ ನೀಡಲು ನಿರ್ಧರಿಸಿದೆ. ಎಲ್ಲಾ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇ. 10ರಷ್ಟು ಹೆಚ್ಚಿಸಲು ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ