ಕ್ಷಮಾಪಣೆ ಕೇಳಿ, ಇಲ್ದಿದ್ರೆ ಕಾನೂನು ಕ್ರಮ ಕೈಗೊಳ್ತೇವೆ: ಕೇಜ್ರಿವಾಲ್‌ಗೆ ಗಡ್ಕರಿ ನೋಟಿಸ್

ಶನಿವಾರ, 1 ಫೆಬ್ರವರಿ 2014 (13:33 IST)
ಬಿ
PR
PR
ಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕೇಜ್ರಿವಾಲ್ ಇತ್ತೀಚಿಗೆ ಬಿಡುಗಡೆಗೊಳಿಸಿದ ಭಾರತದ ಅತಿ ಭ್ರಷ್ಟರ ಪಟ್ಟಿಯಲ್ಲಿ ನಿತಿನ್ ಗಡ್ಕರಿಯವರ ಹೆಸರು ಕೂಡ ಇದ್ದು, ಅವರ ಹೇಳಿಕೆಯನ್ನು ಮೂರು ದಿನಗಳೊಳಗೆ ಹಿಂಪಡೆಯದಿದ್ದರೆ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಗಡ್ಕರಿ ತಮ್ಮ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ.ಈ ನೋಟಿಸ್ ತಲುಪಿದ ಮೂರು ದಿನಗಳೊಳಗಾಗಿ ಕೇಜ್ರಿವಾಲ್ ಸಾರ್ವಜನಿಕವಾಗಿ ಎಲ್ಲ ಸುದ್ದಿ ಮಾಧ್ಯಮಗಳ ಮುಂದೆ ಕ್ಷಮಾಪಣೆ ಕೇಳಬೇಕು ಮತ್ತು ಭಾರತದ ಅತಿ ಭ್ರಷ್ಟರ ಪಟ್ಟಿಯಿಂದ ಗಡ್ಕರಿಯವರ ಹೆಸರನ್ನು ತೆಗೆದು ಹಾಕಬೇಕು.


PR
PR
ತಪ್ಪಿದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಕ್ರೇಜಿವಾಲರ ಈ ಹೇಳಿಕೆಯು ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಗಡ್ಕರಿ ಹೇಳಿದ್ದಾರೆ.ಕೇಜ್ರಿವಾಲ್ ಸುಳ್ಳು, ದುರುದ್ದೇಶಪೂರಿತ ಮತ್ತು ನಿರಾಧಾರ ಆರೋಪಗಳನ್ನು ಮಾಡಿದ್ದು, ಗಡ್ಕರಿ ವರ್ಚಸ್ಸಿಗೆ ಮಸಿಬಳಿಯುವ ಉದ್ದೇಶವನ್ನು ಹೊಂದಿದ್ದಾರೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ