ಚಲಿಸುವ ವಾಹನದಲ್ಲಿ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿದ ಕಾಮುಕರು

ಶುಕ್ರವಾರ, 11 ಅಕ್ಟೋಬರ್ 2013 (16:43 IST)
ಕಾಮುಕರು ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಅಪಹರಿಸಿ ಚಲಿಸುವ ವ್ಯಾನ್‌ನಲ್ಲಿ ಎರಡು ವಾರಗಳ ಕಾಲ ನಿರಂತರ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.

ಆರೋಪಿಗಳಾದ ಮಹೇಂದ್ರ ಸೋನಿ(28) ಮತ್ತು ಈಶ್ವರ್ ಸೋನಿ(32) ಅವರನ್ನು ಬಂಧಿಸಲಾಗಿದ್ದು ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ ಎಂದು ಬಿಲಾಸ್‌ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಮೀನಾ ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಸಹೋದರಿಯರು 15 ಮತ್ತು 13 ವರ್ಷ ವಯಸ್ಸಿನವರಾಗಿದ್ದು, ಪಾಲಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತ್ಯಾಚಾರಕ್ಕೊಳಗಾದ ಬಾಲಕಿಯರ ಪ್ರಕಾರ, ರತ್ನಾಪುರ್ ಫೇರ್‌ನಲ್ಲಿ ಆರೋಪಿ ಮಹೇಂದ್ರ ಪರಿಚಯವಾಗಿದ್ದ, ವ್ಯಾನ್‌ನಲ್ಲಿ ಹಲವು ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದ. ಸಿಮ್ಗಾ ಪಟ್ಟಣದಲ್ಲಿ ಮತ್ತೊಬ್ಬ ಆರೋಪಿ ಈಶ್ವರ್ ವ್ಯಾನ್ ಹತ್ತಿದ್ದ. ನಂತರ ಇಬ್ಬರು ಆರೋಪಿಗಳು ಎರಡು ವಾರಗಳ ಕಾಲ ನಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ. ಪ್ರತಿಭಟನೆ ತೋರಿದ್ರೆ ಹತ್ತೆ ಮಾಡುವುದಾಗಿ ಬೆದರಿಕೆಯೊಡಿದ್ದರು ಎಂದು ತಿಳಿಸಿದ್ದಾಳೆ.

ಏತನ್ಮಧ್ಯೆ, ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ