ಚಾಯ್‌ ಬೇಕಾ ಚಾಯ್‌ ....? ರಾಜಕೀಯ ಮಸಾಲಾ ಚಾಯ್‌

ಶುಕ್ರವಾರ, 14 ಮಾರ್ಚ್ 2014 (14:35 IST)
PR
ನವದೆಹಲಿ: ಈ ಸಲದ ಲೋಕಸಭೆ ಚುನಾವಣೆಯಲ್ಲಿ ಚಾಹ ಜಾಸ್ತಿ ಮಾರಾಟವಾಗುವ ಸಾದ್ಯತೆಗಳು ಹೆಚ್ಚಾಗುತ್ತಿವೆ. ಚಹಾ ರಾಜಕೀಯ ದಿನೆ ದಿನೆ ಹೊಸ ರೂಪ ಪಡುತ್ತಿದೆ.

ಒಂದು ಕಡೆ ಮೋದಿ ಚಾಹ ಮಾರುತ್ತಿದ್ದವರು ಎಂದು ಬಿಜೆಪಿಯವರು ನಮೋ ಟೀ ಅಂಗಡಿಗಳನ್ನು ತರೆದಿದ್ದಾರೆ. ಮಾಧ್ಯಮವರ ಎದುರು ಚಹಾ ಮಾರುವುವರ ತರಹ ಪೋಸ್ ನೀಡುತ್ತಿದ್ದಾರೆ.

ಈದಾದ ನಂತರ ರಾಹುಲ್ ಹಾಲಿನ ಅಂಗಡಿಗಳು ತರೆದು ಕೊಳ್ಳುತ್ತಿವೆ. ಕಾಂಗ್ರೆಸ್‌ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕೂಡ ಹಾಲಿನ ಅಂಗಡಿ ತರೆಯಿತ್ತಿವೆ.

ಇದೆಲ್ಲದರ ಮದ್ಯೆ ಲಾಲು ಪ್ರಸಾದ ಯಾದವರವರು ಕೂಡ ಹಿಂದಿನ ದಿನಗಳಲ್ಲಿ ಚಹಾ ಮಾರುತ್ತಿದ್ದರಂತೆ . ಈಗ ಎಲ್ಲಕಡೆ ಲಾಲು ಚಹಾ ಅಂಗಡಿಗಳು ಪ್ರಾರಂಭವಾಗಿವೆ .

ಇದೆಲ್ಲವನ್ನು ನೋಡಿದರೆ ಈ ಸಲದ ಚುನಾವಣೆ ಚಹಾಭರಿತವಾಗಿರಲಿದೆ ಎಂದು ಅನಿಸುತ್ತಿದೆ. ಸಣ್ಣ ಸಣ್ಣ ಚಹಾದ ಅಂಗಡಿಗಳಲ್ಲಿ ಕೂಡ ಈ ರಾಜಕೀಯ ಚಹಾದ ಬಗ್ಗೆನೆ ಚರ್ಚೆ ನಡೆಯುತ್ತಿದೆ .
ಎಲ್ಲ ರಾಜಕೀಯ ಪಕ್ಷಗಳು ಮತದಾರರನ್ನು ಚಹಾ ಕುಡಿಸುತ್ತಿವೆ. ನಿಮಗೆ ಯಾವ ಚಹಾ ಬೇಕು .. ನಿವೇ
ನೀರ್ಧರಿಸಿ . ಚಹಾ ಕುಡಿಯಿರಿ.. ಮಜಾ ಮಾಡಿರಿ.. ಚಾಯ್‌ ಬೇಕಾ ಚಾಯ್‌ .....

ವೆಬ್ದುನಿಯಾವನ್ನು ಓದಿ