ತೆಲಂಗಾಣ ರಚನೆಗೆ ಸೋನಿಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆಯೇ?

ಶನಿವಾರ, 27 ಜುಲೈ 2013 (08:58 IST)
PR
ಆಂಧ್ರದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಜನರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆಯೇ? ಈ ಕುರಿತು ಸರ್ಕಾರದಿಂದ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ದೊಡ್ಡ ಬೆಳವಣಿಗೆಗಳು ಕೆಳಗಿನಂತಿವೆ.

ಶುಕ್ರವಾರ ಸಂಜೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಹಾಜರಿದ್ದ ಕಾಂಗ್ರೆಸ್ ಹಿರಿಯ ಮುಖಂಡರ ಸಭೆಯಲ್ಲಿ ಆಂಧ್ರವನ್ನು ವಿಭಜಿಸಿ ಹೊಸ ರಾಜ್ಯ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ಮೂಲಗಳು ಹೇಳಿವೆ. ಸೋನಿಯಾ ಗಾಂಧಿ ಈ ಆದೇಶ ನೀಡಿದ್ದು, ಆಂಧ್ರಪ್ರದೇಶದ ಕಾಂಗ್ರೆಸ್ ನಾಯಕರ ಜತೆ ಇದನ್ನು ಹಂಚಿಕೊಳ್ಳಲಾಗುತ್ತದೆ.

ಇದರಿಂದ ಉಂಟಾಗುವ ರಾಜಕೀಯ ಕುಸಿತ ಕನಿಷ್ಠಗೊಳಿಸಲು ಎಚ್ಚರಿಕೆಯ ಮೌಲ್ಯಮಾಪನ ನಿರ್ವಹಿಸುವುದು.ಆಗಸ್ಟ್ 5ರಂದು ಮುಂಗಾರು ಅಧಿವೇಶನ ಆರಂಭವಾದ ಸಂದರ್ಭದಲ್ಲಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸಬಹುದು. ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್ ರಹಸ್ಯ ಸಭೆಯಲ್ಲಿ ದಿಗ್ವಿಜಯ್ ಸಿಂಗ್, ಅಹ್ಮದ್ ಪಟೇಲ್ ಮುಂತಾದವರ ಜತೆ ಮಾತುಕತೆ ನಡೆಸಿದರು.
.

ವೆಬ್ದುನಿಯಾವನ್ನು ಓದಿ