ದೆಹಲಿ : ಆಮ್‌ ಆದ್ಮಿ ಪಕ್ಷ ಕೈ ಜೊತೆಗೆ ಸರ್ಕಾರ ರಚಿಸುತ್ತಾ ?

ಭಾನುವಾರ, 22 ಡಿಸೆಂಬರ್ 2013 (10:30 IST)
PR
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಒಂದು ಪಕ್ಷಕ್ಕು ಸ್ಪಷ್ಟ ಬಹುಮತ ಸಿಕ್ಕಿಲ್ಲ ಇದರಿಂದ ಸರ್ಕಾರ ರಚಿಸುವುದು ಕಷ್ಟವಾಗಿತ್ತು, ಆದರೆ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಸರ್ಕಾರ ರಚಿಸಲು ಸಿದ್ದವಾಗಿದೆ.

ದೆಹಲಿಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಬುಹುತೇಕ ಜನರ ಅಭಿಪ್ರಾಯ ಕಾಂಗ್ರೆಸ್ ಪಕ್ಷದ ಜೊತೆಗೆ ಕೈ ಜೋಡಿಸಿ ಎಂದು ಬಂದಿದೆ. ಫೆಸ್‌‌ಬುಕ್‌ ಮತ್ತು ಇತರ ಮೂಲಗಳಿಂದ ಇದೇ ರೀತಿ ಸಲಹೆಗಳು ಬಂದಿವೆ. ನಾಳೆ ಇದರ ಕುರಿತು ಸ್ಪಷ್ಟ ನಿರ್ಣಯ ಹೊರಬರುವ ಸಾದ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ