ನಮೋ ಟೀ ಸ್ಟಾಲ್ ನಲ್ಲಿ ಇನ್ನು ಸಿಗಲಾರದು ಉಚಿತ ಟೀ..

ಶುಕ್ರವಾರ, 14 ಮಾರ್ಚ್ 2014 (16:41 IST)
PTI
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಚಹಾ ಮಾರುವ ಕಾಯಕವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಪ್ರಾರಂಭ ಮಾಡಿದ್ದ ಟೀ ಸ್ಟಾಲ್ ಮೇಲೆ ಚುನಾವಣಾ ಆಯೋಗದ ಕಣ್ಣು ಬಿದ್ದಿದೆ. ಚುನಾವಣಾ ಆಯೋಗ ಮುಕ್ತ ಟೀ ಮಾರುವ ಮೋದಿ ಬೆಂಬಲಿಗರ ಪ್ರಚಾರ ತಂತ್ರಕ್ಕೆ ಪ್ರತಿಬಂಧವನ್ನು ಹೇರಿದೆ.

ಈ ಚಹಾ ಲಂಚದ ರೂಪ ಎಂದು ಬಗೆದಿರುವ ಆಯೋಗ ಇದು ಚುನಾವಣಾ ನೀತಿ ಸಂಹಿತೆಯ ವಿರುದ್ಧ ಎಂದು ಹೇಳಿದೆ. ಹಾಗಾಗಿ ಬಿಜೆಪಿ ಇನ್ನು ಮೇಲೆ ಮುಕ್ತ ಚಹಾವನ್ನು ಒದಗಿಸಲು ಸಾಧ್ಯವಾಗುವುದಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್ ವಾಜಪೇಯಿ ಆಯೋಗದ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಇನ್ನು ಮೇಲೆ ನಮ್ಮ ಚಹಾ ಸ್ಟಾಲ್‌ನಲ್ಲಿನ ಚಹಾಗೆ ಶುಲ್ಕವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗ ಉತ್ತರಪ್ರದೇಶದಲ್ಲಿ ಮುಕ್ತ ಚಹಾ ಮಾರಾಟ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣವನ್ನು ದಾಖಲಿಸಿದೆ.

ಆಯೋಗದ ಈ ನಡೆ ಮೋದಿ ಬ್ರಾಂಡ್‌ ಮಾಡುತ್ತಿರುವ ಬಿಜೆಪಿಗೆ ಬಹುದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ