ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ರು: ಉಗಾಂಡ ಮಹಿಳೆ ಆರೋಪ

ಬುಧವಾರ, 22 ಜನವರಿ 2014 (13:37 IST)
PR
PR
ಮಧ್ಯರಾತ್ರಿ ತಮ್ಮ ಮನೆಯ ಮೇಲಿನ ರೇಡ್‌ನಲ್ಲಿ ಕಾನೂನು ಸಚಿವ ಸೋಮನಾಥ ಭಾರ್ತಿ ದಾಳಿಯ ನೇತೃತ್ವ ವಹಿಸಿದ್ದರು ಎಂದು ಉಗಾಂಡಾ ಮಹಿಳೆ ನೀಡಿದ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ದಾಖಲು ಮಾಡಿಕೊಂಡಿದ್ದಾರೆ. ಇದರಿಂದಾಗಿ ಸೋಮನಾಥ್ ಭಾರ್ತಿ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಬುಧವಾರ ರಾತ್ರಿ ನಮ್ಮ ಮೇಲೆ ಸೋಮನಾಥ ಭಾರ್ತಿ ಮುಂದಾಳತ್ವದಲ್ಲಿ ಭಾರತೀಯರು ದಾಳಿ ಮಾಡಿದರು. ನಾವು ಕರಿಯರಾಗಿದ್ದು ಕೂಡಲೇ ರಾಷ್ಟ್ರವನ್ನು ತ್ಯಜಿಸುವಂತೆ ಬೆದರಿಕೆ ಹಾಕಿದರು. ನಮಗೆ ಕಿರುಕುಳ ನೀಡಿ ಥಳಿಸಿದರು.ಅವರ ಬಳಿ ಉದ್ದದ ಕೋಲುಗಳಿದ್ದವು. ನಾವು ಈ ದೇಶ ಬಿಟ್ಟು ಹೋಗದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು.

ಮರುದಿನ ಟಿವಿಯಲ್ಲಿ ಕಾಣಿಸಿಕೊಂಡಾಗ ಭಾರ್ತಿಯವರ ಮಫ್ಲರ್‌ನಿಂದಾಗಿ ತಾನು ಅವರ ಗುರುತು ಹಿಡಿದೆ ಎಂದು ಮಹಿಳೆ ಹೇಳಿದ್ದಾರೆ. ಭಾನುವಾರ ದೆಹಲಿ ಪೊಲೀಸರು ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು. ದೆಹಲಿ ಮಹಿಳಾ ಆಯೋಗ ಸಚಿವರನ್ನು ವಜಾ ಮಾಡಬೇಕೆಂದು ಒತ್ತಾಯಿಸಿದೆ. ಮಹಿಳೆಯ ಆರೋಪ ಗಂಭೀರವಾಗಿದ್ದು,ಕಾನೂನು ಸಚಿವರಿಗೆ ಅಧಿಕಾರದಲ್ಲಿ ಉಳಿಯುವ ಹಕ್ಕಿಲ್ಲ ಎಂದು ಆಯೋಗದ ಅಧ್ಯಕ್ಷೆ ಭಾರ್ಕಾ ಸಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ