ನರೇಂದ್ರ ಮೋದಿಯವ್ರೆ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣ: ಆಡ್ವಾಣಿ

ಸೋಮವಾರ, 20 ಜನವರಿ 2014 (13:57 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಯ್ಕೆಯನ್ನು ವಿರೋಧಿಸಿದ್ದ ಪಕ್ಷದ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ, ಹೆಚ್ಚಿನ ಆತ್ಮವಿಶ್ವಾಸ ತೋರಿದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶ ಕಳೆದುಕೊಳ್ಳುತ್ತದೆ ಎಂದು ಹೊಸ ರಾಗ ಎಳೆದಿದ್ದಾರೆ.

ಬಿಜೆಪಿ ನಾಯಕರಲ್ಲಿ ಆತ್ಮವಿಶ್ವಾಸ ಮತ್ತು ಉತ್ಸಾಹ ಮೇರೆ ಮೀರಿಲ್ಲ. ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಿದ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಇತರ ಸಹದ್ಯೋಗಿಗಳಿಗೆ ಅಭಿನಂಧಿಸಿ ಬಹುಮತ ಗಳಿಸಿ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಹಾರೈಸಿದ್ದಾರೆ.

ಕಳೆದ ಐದಾರು ತಿಂಗಳುಗಳ ಅವಧಿಯಲ್ಲಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಗಳಿಗೆ ದೊರೆತ ಬೆಂಬಲ ಇತರ ಪಕ್ಷಗಳ ನಾಯಕರ ಸಭೆಗಳಿಗೆ ದೊರೆಯುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರರ್ ಮೋದಿ ಈಗಾಗಲೇ 77 ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡಿದ್ದು, ಶೀಘ್ರದಲ್ಲಿ ಶತಕ ಬಾರಿಸಲಿದ್ದಾರೆ. ಆದರೆ, ಅದೇ ಸಂದರ್ಭದಲ್ಲಿ ಹೆಚ್ಚಿನ ಆತ್ಮವಿಶ್ವಾಸ ತೋರದಂತೆ ಮೋದಿಗೆ ಸಲಹೆ ನೀಡಿದರು.

ಕಳೆದ 2004ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೆಚ್ಚಿನ ಆತ್ಮ ವಿಶ್ವಾಸ ಹೊಂದಿದ್ದರಿಂದ ಸೋಲನುಭವಿಸಬೇಕಾಯಿತು. ವಿಶ್ವಾಸದಿಂದ ಚುನಾವಣೆಯನ್ನು ಎದುರಿಸಿ ಎಂದು ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ