ನರೇಂದ್ರ ಮೋದಿ ನನ್ನನ್ನು ತಮ್ಮ ಜೀವನದಿಂದ ಹೊರಗಿಟ್ಟಿದ್ದಾರೆ: ಮೋದಿ ಪತ್ನಿ ಅಳಲು

ಸೋಮವಾರ, 3 ಫೆಬ್ರವರಿ 2014 (14:13 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾದ ನರೇಂದ್ರ ಮೋದಿಗೆ ಕೆಟ್ಟ ಘಳಿಗೆ ಕಾಡುತ್ತಿರುವುದರಿಂದ ನನ್ನನ್ನು ಅವರ ಜೀವನದಿಂದ ದೂರಮಾಡಿದ್ದಾರೆ ಎಂದು ಮೋದಿ ಪತ್ನಿ ಜಶೋದಾಬೆನ್ ಅಲವತ್ತುಕೊಂಡಿದ್ದಾರೆ.

ಜಶೋದಾಬೆನ್ 17 ವರ್ಷ ವಯಸ್ಸಿನವಳಾಗಿದ್ದಾಗ ವಿವಾಹವಾಗಿರುವ ಬಗ್ಗೆ 63 ವರ್ಷ ವಯಸ್ಸಿನ ನರೇಂದ್ರ ಮೋದಿ ಇಂತಹ ವರದಿಗಳು ಬಗ್ಗೆ ಯಾವತ್ತೂ ಹೇಳಿಕೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ನಿವೃತ್ತ ಶಾಲಾ ಶಿಕ್ಷಕಿಯಾದ ಜಶೋದಾ ಬೆನ್ ಮಾಧ್ಯಮಗಳಿಗೆ ಅಪರೂಪದ ಸಂದರ್ಶನ ನೀಡಿ, ನನ್ನ ಮತ್ತು ಮೋದಿಯ ವಿವಾಹವಾದ ಮೂರು ವರ್ಷಗಳ ನಂತರ ನನ್ನನ್ನು ತೊರೆದುಹೋಗಿದ್ದಾರೆ.ಮತ್ತೆ ಭೇಟಿಯಾಗಿಲ್ಲ. ಅವರು ನನ್ನನ್ನು ತೊರೆದಿರುವುದು ನನಗೆ ಕೆಟ್ಟದ್ದು ಎನಿಸುವುದಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿಯವರ ಹಣೆಬರಹ ಮತ್ತು ಅವರಿಗೆ ಕೆಟ್ಟಘಳಿಗೆಗಳು ಕಾಡುತ್ತಿರುವುದರಿಂದ ಈ ರೀತಿ ವರ್ತಿಸುತ್ತಿದ್ದಾರೆ. ನನ್ನನ್ನು ಯಾವತ್ತೂ ಅವರು ಪತ್ನಿಯಂತೆ ಪರಿಗಣಿಸಿಯೇ ಇಲ್ಲ. ನನ್ನ ಬಗ್ಗೆ ಬೇರೆಯವರು ಕೇಳಿದಾಗಲೆಲ್ಲಾ ಸುಳ್ಳು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದುತ್ವವಾದಿ ಆರೆಸ್ಸೆಸ್ ಸಂಘಟನೆಯಲ್ಲಿ ಸದಸ್ಯರು ವಿವಾಹವಾಗುವುದಕ್ಕೆ ನಿಷೇಧ ಹೇರಲಾಗಿತ್ತು. ಒಂದು ವೇಳೆ ಮೋದಿ ವಿವಾಹವಾಗಿರುವುದು ಬಹಿರಂಗವಾಗಿದ್ದರೆ ಆರೆಸ್ಸೆಸ್ ಸದಸ್ಯರಾಗುವುದು ಸಾಧ್ಯವಾಗುತ್ತಿರಲಿಲ್ಲ ಆದ್ದರಿಂದ ಅವರು ವಿವಾಹದ ವರದಿಯನ್ನು ರಹಸ್ಯವಾಗಿಟ್ಟಿರಬಹುದು ಎಂದು ಮೋದಿ ಬಯೋಗ್ರಾಫಿ ಬರೆದ ಲೇಖಕ ನೀಲಂಜನ್ ಮುಖ್ಯಾಪಾಧ್ಯಾಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ 2008ರಲ್ಲಿ ಪತ್ರಿಕೆಯೊಂದು ಜಶೋದಾಬೆನ್ ಶಿಕ್ಷಕಿಯಾಗಿದ್ದ ಶಾಲೆಗೆ ಭೇಟಿ ನೀಡಿ ಸಂದರ್ಶನ ನೀಡುವಂತೆ ಕೋರಿತ್ತು. ಆದರೆ, ಪತಿ ಮೋದಿ ತುಂಬಾ ಪ್ರಬಲವಾಗಿರುವುದರಿಂದ ನನಗೆ ಹೆದರಿಕೆಯಾಗುತ್ತದೆ ಎಂದು ಸಂದರ್ಶನ ನೀಡಲು ನಿರಾಕರಿಸಿದ್ದರು.

ನರೇಂದ್ರ ಮೋದಿ ಒಂದಲ್ಲಾ ಒಂದು ದಿನ ಪ್ರಧಾನಿಯಾಗುತ್ತಾರೆ ಎನ್ನುವುದು ನನಗೆ ಗೊತ್ತಿತ್ತು ಎಂದು ಮೋದಿ ಪತ್ನಿ ಜಶೋದಾಬೆನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ