ಪ್ರಣಾಳಿಕೆ ಬಿಡುಗಡೆ ಮಾಡಿದ ಜಯಾಗೆ ಪ್ರಧಾನಿ ಹುದ್ದೆ ಮೇಲೆ ಕಣ್ಣು

ಮಂಗಳವಾರ, 25 ಫೆಬ್ರವರಿ 2014 (14:56 IST)
PR
PR
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರಾಷ್ಟ್ರೀಯ ಚುನಾವಣೆಗೆ ತಮ್ಮ ಎಐಎಡಿಎಂಕೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಮಟ್ಟದ ಅನೇಕ ಭರವಸೆಗಳ ಸರಣಿಯನ್ನು ಪ್ರಕಟಿಸಿದ್ದು, ಜಯಾ ಅವರ ಪ್ರಧಾನಮಂತ್ರಿ ಮಹಾತ್ವಾಕಾಂಕ್ಷೆಗೆ ಯಾವುದೇ ಅನುಮಾನ ಉಳಿಸಿಲ್ಲ.ಜಯಾ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಬೆಲೆ ನಿರ್ಧರಿಸುವ ವ್ಯವಸ್ಥೆಯನ್ನು ಬದಲಿಸುವುದಾಗಿ, ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನಕ್ಕಾಗಿ ಕಾರ್ಯನಿರ್ವಹಿಸುವುದಾಗಿ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.

ಶ್ರೀಲಂಕಾದಲ್ಲಿ ತಮಿಳರ ಜನಾಭಿಪ್ರಾಯ ಸಂಗ್ರಹಕ್ಕೆ ಪಕ್ಷವು ಒತ್ತಾಯಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಮಹಿಳಾ ಮಸೂದೆಯನ್ನು ಜಾರಿಗೆ ತರುವುದಾಗಿಯೂ ಮತ್ತು ಕಪ್ಪು ಹಣವನ್ನು ವಾಪಸು ತರುವುದು ಕೂಡ ಕಾರ್ಯಸೂಚಿಯಲ್ಲಿದೆ ಎಂದು ಜಯಾ ಹೇಳಿದ್ದಾರೆ.ನಾವು ಅನೇಕ ಯೋಜನೆಗಳ ಅನುಷ್ಠಾನಕ್ಕೆ ಅನೇಕ ನೀತಿಗಳು ಮತ್ತು ಭರವಸೆಗಳನ್ನು ಪ್ರಕಟಿಸಿದ್ದೇವೆ.

ಇವು ತಮಿಳುನಾಡು ಅಭಿವೃದ್ಧಿ ಮಾತ್ರವಲ್ಲದೇ ಇಡೀ ರಾಷ್ಟ್ರದ ಪ್ರಗತಿಯ ಗುರಿ ಹೊಂದಿದೆ ಎಂದು ಜಯಲಲಿತಾ ತಿಳಿಸಿದರು. ಸೋಮವಾರ, ಜಯಲಲಿತಾ ಪಕ್ಷದ 39 ಸೀಟುಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಎರಡು ಎಡ ಪಕ್ಷಗಳ ಜತೆ ಸೀಟು ಹಂಚಿಕೆ ಒಪ್ಪಂದ ಏರ್ಪಟ್ಟ ಬಳಿಕ ಕೆಲವು ಸೀಟುಗಳನ್ನು ಹಿಂತೆಗೆಯುವುದಾಗಿ ಜಯಾ ತಿಳಿಸಿದರು.

ವೆಬ್ದುನಿಯಾವನ್ನು ಓದಿ