ಪ್ರಿಯಕರನ ಭೇಟಿಗಾಗಿ ನಕಲಿ ಪಾಸ್‌ಪೋರ್ಟ್ ಬಳಿಸಿ ಪಾಕ್‌ಗೆ ಹಾರಿದ ಗುಜರಾತ್ ಯುವತಿ

ಮಂಗಳವಾರ, 1 ಏಪ್ರಿಲ್ 2014 (11:38 IST)
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಭೇಟಿಯಾಗಿ ಭೇಟಿ ನಂತರ ಪ್ರೀತಿಗೆ ತಿರುಗಿದ್ದರಿಂದ ಪ್ರಿಯತಮನನ್ನು ಭೇಟಿ ಮಾಡಲು ನಕಲಿ ಪಾಸ್‌ಪೋರ್ಟ್ ಬಳಿಸಿ ಕತಾರ್‌ನ ದೋಹಾ ನಗರದ ವಿಮಾನ ನಿಲ್ದಾಣದಿಂದ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಆದರೆ, ಪಾಸ್‌ಪೋರ್ಟ್ ನಕಲಿಯಾಗಿರುವುದನ್ನು ಕಂಡ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ವಾಪಸ್ ಕಳುಹಿಸಿದ್ದಾರೆ.

20 ವರ್ಷ ವಯಸ್ಸಿನ ಆರೋಪಿ ಯುವತಿ ನಗೀತಾ ರಮೇಶ್ ಗುಜರಾತ್ ಮೂಲದವಳಾಗಿದ್ದು, ಪಂಜಾಬ್ ರಾಜ್ಯದ ಮುಲ್ತಾನ್ ಸಿಟಿಯ ವಾಸಿಯಾದ ಅಜರ್‌ನನ್ನು ಭೇಟಿ ಮೀಡಲು ಇಂದು ಬೆಳಿಗ್ಗೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾಳೆ.

ಯುವತಿ ವಿಮಾನ ನಿಲ್ದಾಣದಲ್ಲಿ ಇಳಿದೊಡನೆ ನಿಲ್ದಾಣದ ವಲಸೆ ಅಧಿಕಾರಿಗಳು ಆಕೆಯ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎನ್ನುವುದು ದೃಢಪಟ್ಟಿದೆ. ಮತ್ತೆ ಆಕೆಯನ್ನು ದೋಹಾ ನಗರಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಅಂತರ್ಜಾಲ ತಾಣದ ಮೂಲಕ ಅಜರ್ ಪರಿಚಯವಾಗಿದ್ದು, ಪರಿಚಯ ನಂತರ ಪ್ರೇಮಕ್ಕೆ ತಿರುಗಿದೆ. ನಾನು ಈಗಾಗಲೇ ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಿದ್ದೇನೆ. ಪಾಸ್‌ಪೋರ್ಟ್‌ನಲ್ಲೂ ನಿಮ್ರಾ ಎಂದು ಹೆಸರು ದಾಖಲಿಸಿರುವುದಾಗಿ ಯುವತಿ, ವಲಸೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ.

ವಿಮಾನ ನಿಲ್ದಾಣಕ್ಕೆ ಆಕೆಯನ್ನು ಕರೆದುಕೊಂಡ ಹೋಗಲು ಬಂದಿದ್ದ ಪ್ರಿಯಕರ ಅಜರ್‌ನನ್ನು ಕೂಡಲೇ ವಶಕ್ಕೆ ತೆಗೆದುಕೊಂಡ ವಲಸೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಪಾಕಿಸ್ತಾನದ ಕಾನೂನಿನ ಪ್ರಕಾರ ನಕಲಿ ಪಾಸ್‌ಪೋರ್ಟ್ ಬಳಸಿ ಪಾಕ್‌ಗೆ ಭೇಟಿ ಮಾಡುವ ಪ್ರಯಾಣಿಕರನ್ನು ಬಂಧಿಸದೆ ವಾಪಸ್‌ ಕಳುಹಿಸಲಾಗುತ್ತದೆ ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ