ಬಿಜೆಪಿ ಕೋರ್ ಕಮಿಟಿ: ಮೋದಿ ಗುಜರಾತ್ ಸೂರತ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆ

ಗುರುವಾರ, 27 ಫೆಬ್ರವರಿ 2014 (13:13 IST)
PR
PR
ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಡ್ವಾಣಿ ಮುಂತಾದ ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ. ಇಂದು ಮಹಾರಾಷ್ಟ್ರ, ಉತ್ತರಾಖಂಡ್, ಗೋವಾ, ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಲೋಕಸಭಾ ಪಟ್ಟಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಮೊದಲ ಪಟ್ಟಿಯಾದ್ದರಿಂದ ನರೇಂದ್ರ ಮೋದಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ನಿರ್ಧಾರವಾಗುತ್ತದೆ. ಮೂಲಗಳ ಪ್ರಕಾರ ನರೇಂದ್ರ ಗುಜರಾತ್ ಸೂರತ್‌ನಿಂದ ಸ್ಪರ್ಧಿಸುವುದು ಇಂದು ಘೋಷಣೆಯಾಗುವ ಸಾಧ್ಯತೆಯಿದೆ. ರಾಮವಿಲಾಸ್ ಪಾಸ್ವಾನ್ ಅವರು ಎನ್‌ಡಿಎ ಜತೆ ಮೈತ್ರಿಯ ಪ್ರಸ್ತಾಪವನ್ನು ಕೂಡ ಚರ್ಚಿಸಲಾಗುತ್ತದೆ.

ಪ್ರಮುಖವಾಗಿ ನರೇಂದ್ರ ಮೋದಿ ಎಲ್ಲಿಂದ ಮತ್ತು ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದರತ್ತ ಎಲ್ಲರ ಚಿತ್ತ ನೆಟ್ಟಿದೆ. ಬೆಂಗಳೂರು ಉತ್ತರಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯಕೋರ್ ಕಮಿಟಿ ಸಭೆ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ.

ವೆಬ್ದುನಿಯಾವನ್ನು ಓದಿ