ಮೋದಿ ಚಹಾ, ರಾಹುಲ್ ಹಾಲು : ಆಯ್ಕೆ ನಿಮ್ಮದು

ಶುಕ್ರವಾರ, 14 ಮಾರ್ಚ್ 2014 (14:34 IST)
PTI
ದೇಶದಲ್ಲಿ ರಾಜಕೀಯ ಋತುವಿನ ಬೇಗೆ ಹೆಚ್ಚುತ್ತಿದ್ದು, ಬಿಸಿ ಬಿಸಿ ಪಾನೀಯಗಳನ್ನು ಕುಡಿಸುವುದರ ಮೂಲಕ ತಮ್ಮ ಪ್ರಚಾರದ ಕಾವು ಏರಿಸಲು ಮುಂಚೂಣಿ ಪಕ್ಷಗಳು ಸ್ಪರ್ಧೆಗಿಳಿದಿವೆ. ನಮೋ ಟೀ ಸ್ಟಾಲ್ ಮೂಲಕ ಬಿಜೆಪಿ ಯ ಕಾರ್ಯಕರ್ತರು ಪ್ರಾರಂಭಿಸಿರುವ ಅಭಿಯಾನದ ಅನುಕರಣೆಯಾಗಿ ಲಾಲು ಬೆಂಬಗಲಿಗರು ಲಾಲೂ ಟೀ ಸ್ಟಾಲ್ ಮಾಡಲು ಹೊರಟಿದ್ದರೆ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ರಾಹುಲ್ ಮಿಲ್ಕ ನ್ನು ಕುಡಿಸ ಹೊರಟಿದ್ದಾರೆ.

" ಜಿಲ್ಲೆಯ 19 ಬ್ಲಾಕ್ ಗಳಲ್ಲಿನ ಮತಗಟ್ಟೆಗಳಲ್ಲಿ ರಾಹುಲ್ ಗಾಂಧಿ ಚಿತ್ರವುಳ್ಳ ಪ್ಲಾಸ್ಟಿಕ್ ಗ್ಲಾಸ್ ನಲ್ಲಿ 'ರಾಹುಲ್ ಹಾಲ'ನ್ನು ವಿತರಿಸಲಾಗುವುದು "ಎಂದು ಗೋರಕ್ಪುರ್ ಕಾಂಗ್ರೆಸ್ ನ ಸಯದ್ ಜಮಾಲ್ ಹೇಳಿದ್ದಾರೆ.
PTI

ಪ್ರತಿಯೊಂದು ಮತಗಟ್ಟೆಯಲ್ಲಿಯೂ 50 ಲೀಟರ್ ಹಾಲನ್ನು ವಿತರಿಸಲಾಗುವುದು. ಹಾಲಿನ ಅಂಗಡಿಯ ಮೇಲೆ 'ವಿಷಕಾರಿ ಟೀ ಅಲ್ಲ, ಸಿಹಿಯಾದ ಹಾಲನ್ನು ಕುಡಿಸುತ್ತೇವೆ, ದೇಶದ ನವಯುವಕರನ್ನು ಪೈಲ್ ವಾನ್ ರನ್ನಾಗಿ ಮಾಡುತ್ತೇವೆ' ಎಂಬ ಘೋಷಣೆಯನ್ನು ಬರೆಯಲಾಗಿದೆ.

ನಮೋ ಟೀ ಸ್ಟಾಲ್ (ಚಾಯ್ ಪೆ ಚರ್ಚಾ) ,ಜನರು ಮೋದಿಯನ್ನು ಪ್ರಶ್ನಿಸಲು ಅವಕಾಶ ನೀಡುತ್ತದೆ ಆದರೆ ರಾಹುಲ್ ಮಿಲ್ಕ ನಲ್ಲಿ ಅಂತಹ ಅವಕಾಶಗಳಿಲ್ಲ.

ವೆಬ್ದುನಿಯಾವನ್ನು ಓದಿ