ಮೋದಿ ಜನಪ್ರಿಯತೆ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ: ಬಿಜೆಪಿ

ಭಾನುವಾರ, 30 ಜೂನ್ 2013 (10:51 IST)
PTI
ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಚರಿಸ್ಮಾ ಮತ್ತು ಇತ್ತೀಚೆಗೆ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಕಾರಣ ಅವರನ್ನು ಕಾಂಗ್ರೆಸ್‌ ವಾಗ್ಧಾಳಿಗೆ ಗುರಿ ಮಾಡುತ್ತಿದೆ. ಮೋದಿಯವರ ಜನಪ್ರಿಯತೆಯಿಂದ ಕಾಂಗ್ರೆಸ್‌ ಹೆದರಿದೆ ಎಂದು ಬಿಜೆಪಿ ರಾಜಾಧ್ಯಕ್ಷ ದೇವೇಂದ್ರ ಪಡ್ನಾವೀಸ್‌ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪಡ್ನಾವೀಸ್‌, ನೆರೆ ಊಧ್ìಸ್ಥ ಉತ್ತರಖಂಡಕ್ಕೆ ಮೋದಿ ಭೇಟಿ ನೀಡಿದ ಕುರಿತಾದ ಟೀಕಾಪ್ರಹಾರಗಳಿಗೆ ಪ್ರತಿಕ್ರಿಯಿಸುತ್ತಿದ್ದರು.

ಗುಜರಾತ್‌ ಸಂತ್ರಸ್ತರನ್ನು ಮಾತ್ರ ಭೇಟಿಯಾಗಲು ಮೋದಿ ಉತ್ತರಖಂಡಕ್ಕೆ ಹೋಗಿದ್ದರು ಎಂದು ಹೇಳುವುದು ತಪ್ಪು. ಉತ್ತರಖಂಡ ಮುಖ್ಯಮಂತ್ರಿ ವಿಜಯ್‌ ಬಹುಗುಣ ಅವರನ್ನೂ ಭೇಟಿಯಾಗಿದ್ದ ಮೋದಿ ಹಾನಿಗೊಂಡ ಕೇದಾರನಾಥ ಮಂದಿರವನ್ನು ಆಧುನಿಕ ರೀತಿಯಲ್ಲಿ ನವೀಕರಣಗೊಳಿಸುವ ಹೊಣೆ ಹೊತ್ತುಕೊಳ್ಳಲು ಮತ್ತು ಇತರ ನೆರವು ಒದಗಿಸಲು ಗುಜರಾತ್‌ ಸರಕಾರ ಸಿದ್ಧವಿದೆ ಎಂದು ಹೇಳಿದ್ದರು ಎಂದರು.

ಮಹಾರಾಷ್ಟ್ರದ ರಾಜಕೀಯ ವಸ್ತುಸ್ಥಿತಿ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಮತ ಹಂಚಿಕೆ ಪ್ರಮಾಣ ಕುಸಿಯುತ್ತಿದೆ. ಆದರೆ ಅಧಿಕಾರದಲ್ಲಿದೆ. ಇದಕ್ಕೆ ಪ್ರತಿಪಕ್ಷಗಳು ಸಿಡಿದು ಹೋಗಿರುವುದು ಕಾರಣವಾಗಿದೆ. ಹಾಗಾಗಿ ಕೇಸರಿ ಮೈತ್ರಿಕೂಟದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯನ್ನು ಸೇರಿಸಿಕೊಳ್ಳಲು ಬಿಜೆಪಿ ಬಯಸಿದೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಮೂಡಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ