ರಾಮದೇವ್ ಯಡವಟ್ಟು: ಗ್ಯಾಂಗ್‌ರೇಪ್‌ ಬಾಲಕಿ ಗುರುತು ಬಟಾಬಯಲು

ಸೋಮವಾರ, 23 ಡಿಸೆಂಬರ್ 2013 (12:29 IST)
PR
PR
ಚಂದೀಗಢ: ದೆಹಲಿ ಗ್ಯಾಂಗ್ ರೇಪ್ ಘಟನೆ ಬಳಿಕ ಯಾವುದೇ ಸಂದರ್ಭದಲ್ಲೂ ರೇಪ್‌ಗೆ ಒಳಪಟ್ಟ ಯುವತಿ ಅಥವಾ ಕುಟುಂಬದ ಗುರುತು ಬಹಿರಂಗ ಮಾಡಬಾರದು ಎಂದು ಬಾಬಾ ರಾಮ್‌ದೇವ್ ಹೇಳಿದ್ದರು. ಇದರಿಂದ ಅವರಿಗೆ ಅಪಮಾನವಾಗುವುದು ತಪ್ಪುತ್ತದೆ ಎಂದು ನುಡಿದಿದ್ದರು. ಆದರೆ ಹಾಗೆ ಹೇಳಿದ್ದ ರಾಮದೇವ್ ಸ್ವತಃ ಶನಿವಾರ, ಐವರು ಪೊಲೀಸ್ ಪೇದೆಗಳಿಂದ ಗ್ಯಾಂಗ್‌ರೇಪ್‌ಗೆ ಗುರಿಯಾದ 10 ನೇ ತರಗತಿ ವಿದ್ಯಾರ್ಥಿನಿಯ ಗುರುತು ಬಹಿರಂಗಪಡಿಸಿ, ಯಡವಟ್ಟು ಮಾಡಿದ್ದಾರೆ. ಶನಿವಾರ ಸುಮಾರು ಮಧ್ಯಾಹ್ನ ಗಂಟೆಗೆ, ಪೊಲೀಸ್ ಅಧಿಕಾರಿಗಳೊಂದಿಗೆ ಪೊಲೀಸ್ ಪೇದೆಗಳಿಂದ ಅತ್ಯಾಚಾರಕ್ಕೊಳಪಟ್ಟ ಬಾಲಕಿಯ ಮನೆಗೆ ತೆರಳಿ, ತಮ್ಮ ಸಂಸ್ಥೆ ಬಾಲಕಿಯ ಶಿಕ್ಷಣ ಮತ್ತು ವಿವಾಹ ಖರ್ಚುವೆಚ್ಚಗಳನ್ನು ನಿರ್ವಹಿಸುವುದಾಗಿ ತಿಳಿಸಿದರು.

ಆದರೆ ರಾಮದೇವ್ ಅವರು ಭೇಟಿಕೊಟ್ಟಾಗ ದುರ್ದೈವಿ ಬಾಲಕಿಯ ಮನೆಯ ಎದುರು ಭಾರೀ ಜನರ ಗುಂಪು ನೆರೆದಿತ್ತು. ರೇಪ್‌ಗೊಳಗಾದ ಬಾಲಕಿ ಯಾರೆಂಬುದು ಸುತ್ತಮುತ್ತಲಿನ ಜನರಿಗೆ ತಿಳಿಯಿತು. ರಾಮದೇವ್ ಸ್ಟಂಟ್‌ನಿಂದ ಬಾಲಕಿಯ ಗುರುತು ಜಗಜ್ಜಾಹೀರಾಯಿತು. ಡಿಎಸ್‌ಪಿ ಆಶಿಶ್ ಕಪೂರ್ ಮತ್ತು ಡಿಎಸ್‌ಪಿ ಜಗಬೀರ್ ಸಿಂಗ್ ರಾಮ್‌ದೇವ್ ಜತೆಗೂಡಿದ್ದರು.

ವೆಬ್ದುನಿಯಾವನ್ನು ಓದಿ