ರಾಹುಲ್ ಗಾಂಧಿಯ ಎದುರು ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್ ಬಚ್ಚಾಗಳು: ಲಾಲು ಯಾದವ್

ಸೋಮವಾರ, 30 ಡಿಸೆಂಬರ್ 2013 (13:54 IST)
PTI
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಎದುರು ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಬಚ್ಚಾಗಳಂತೆ ಎಂದು ಮಾಜಿ ಮುಖ್ಯಮಂತ್ರಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಕೋಮುಗಲಭೆಗೆ ತುತ್ತಾಗಿ ನಿರಾಶ್ರಿತ ಶಿಬಿರದಲ್ಲಿರುವ ಜನತೆಯನ್ನು ಭೇಟಿ ಮಾಡಿದ ಲಾಲು ಯಾದವ್, ಬಿಜೆಪಿ ಮತ್ತು ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷಗಳು ಕೋಮುಗಲಭೆಗೆ ನೇರ ಹೊಣೆಯಾಗಿವೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯ ಜನಪರ ಚಿಂತನೆಗಳ ಎದುರು ಕೇಜ್ರಿವಾಲ್ ಮತ್ತು ಮೋದಿ ಏನೂ ಅಲ್ಲ. ಸಾರ್ವಜನಿಕರಾದ ನೀವು ಮೋದಿ ಮತ್ತು ಕೇಜ್ರಿವಾಲ್‌ಗೆ ಹೆಚ್ಚಿನ ಪ್ರಚಾರ ನೀಡಿ ಅಟ್ಟಕ್ಕೇರಿಸಿದ್ದೀರಿ. ಸಾರ್ವಜನಿಕರ ಅಭಿವೃದ್ಧಿಗೆ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕೋಮುಗಲಭೆಯಲ್ಲಿ ನೊಂದವರ ಕಣ್ಣೀರು ಒರೆಸಲು ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಉರಿಗೆ ನೀವು ಮರಳಿ. ಸರಕಾರ ಕೂಡಲೇ ನಿರಾಶ್ರಿತರ ಏಳಿಗೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಲಾಲು ಒತ್ತಾಯಿಸಿದರು.

ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತದೆ. ಸ್ವತಃ ಅದರ ಮುಖಂಡರೇ ಭ್ರಷ್ಟರಾಗಿದ್ದಾರೆ. ಇದೊಂದು ನಾಟಕ ಕಂಪೆನಿಯಾಗಿದೆ ಎಂದು ಟೀಕಿಸಿದರು.

ಉತ್ತರಪ್ರದೇಶದಲ್ಲಿ ನಡೆದ ಕೋಮುಗಲಭೆ ನಡೆಯಲಿದೆ ಎನ್ನುವ ಬಗ್ಗೆ ಆರೆಸ್ಸೆಸ್, ಮೋದಿ ಮತ್ತು ಅಮಿತ್ ಶಾ ಅವರಿಗೆ ಮುಂಚಿತವಾಗಿ ತಿಳಿದಿತ್ತು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ