ರಾಹುಲ್ ಗಾಂಧಿ ಚಿಕ್ಕ ಪಕ್ಷಿಯಂತೆ, ನರೇಂದ್ರ ಮೋದಿ ಘರ್ಜಿಸುವ ಸಿಂಹದಂತೆ: ಮನೇಕಾ ಗಾಂಧಿ

ಗುರುವಾರ, 16 ಜನವರಿ 2014 (16:01 IST)
PTI
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷಿಯಾದ್ರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಿಂಹದಂತೆ. ಯಾವುದೇ ರೀತಿಯ ಹೋಲಿಕೆಯಿಲ್ಲ ಎಂದು ಬಿಜೆಪಿ ನಾಯಕಿ ಮನೇಕಾ ಗಾಂಧಿ ಹೇಳಿದ್ದಾರೆ.

ಎಐಸಿಸಿ ಕಾರ್ಯಕಾರಿ ಸಭೆ ನಾಳೆ ನಡೆಯಲಿರುವಂತೆಯೇ ಒಂದು ದಿನ ಮುಂಚೆ ಹೇಳಿಕೆ ನೀಡಿದ ಮೇನಕಾ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಯಾಗಲಿ ಅಥವಾ ಇತರ ಮುಖಂಡರಿಂದಾಗಲಿ ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಉಳಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಕಳೆದ 10 ವರ್ಷಗಳಿಂದ ರಾಹುಲ್ ಗಾಂಧಿಯವರನ್ನು ಮುಂಚೂಣಿ ನಾಯಕನನ್ನಾಗಿ ಬಿಂಬಿಸುತ್ತಿದೆ. ಆದರೆ, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ. ರಾಹುಲ್‌ಗೆ ಒಳ್ಳೆಯ ಇಮೇಜ್ ನೀಡಲು 500 ಕೋಟಿ ಅಥವಾ 5000 ಕೋಟಿ ಖರ್ಚು ಮಾಡಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.

10 ವರ್ಷಗಳಿಂದ ತಾಯಿ ಮತ್ತು ಮಗ ಸರಕಾರ ನಡೆಸುತ್ತಿದ್ದಾರೆ. ಆದರೆ, ಅದರಿಂದ ಏನು ಸಾಧಿಸಿದಂತಾಗಿದೆ? ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ನಾಯಕರಿಲ್ಲ. ಕಾಂಗ್ರೆಸ್ ಪಕ್ಷ ಹಗರಣಗಳಿಂದ ಹಣವನ್ನು ಲೂಟಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ಕಳೆದ 20 ವರ್ಷಗಳಿಂದ ಪ್ರಿಯಾಂಕಾ ಗಾಂಧಿಯ ಗ್ಲ್ಯಾಮರ್ ಬಗ್ಗೆ ಹೇಳಿಕೆ ನೀಡುತ್ತಿದೆ. ಆದರೆ ಯಾವ ಗ್ಲ್ಯಾಮರ್‌ ಕೂಡಾ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕಿ ಮನೇಕಾ ಗಾಂಧಿ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ