ಲೋಕಸಭಾ ಚುನಾವಣೆ: ಇಂದು ಅಭ್ಯರ್ಥಿಗಳ 2 ನೇ ಪಟ್ಟಿಯನ್ನು ಬಿಡುಗಡೆ ಮಾಡಲಿರುವ ಆಪ್

ಶುಕ್ರವಾರ, 21 ಫೆಬ್ರವರಿ 2014 (14:01 IST)
PTI
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಶುಕ್ರವಾರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ 2 ನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

ಇದು ಆಪ್ ಸಾರ್ವತ್ರಿಕ ಚುನಾವಣೆಗೆ ಸೂಕ್ಷ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ ಎಂಬ ಸ್ಪಷ್ಟ ಸೂಚನೆ ನೀಡುತ್ತಿದೆ.

ವರದಿಗಳ ಪ್ರಕಾರ ರಾಖಿ ಬಿಡ್ಲಾ, ರಬ್ಬಿ ಶೇರ್ಗಿಲ್, ಆದರ್ಶ್ ಶಾಸ್ತ್ರಿ, ಅಶೋಕ್ ಜೈನ್, ರಾಜೇಶ್ ಯಾದವ್, ಕೆ.ಪಿ. ಯಾದವ್, ಸಂಜೀವ್ ಸಿಂಗ್ ಹೆಸರುಗಳು 2 ನೇ ಪಟ್ಟಿಯಲ್ಲಿವೆ.

ಆಪ್ ಕಳೆದ ಭಾನುವಾರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಅಶುತೋಷ್, ಮುಕುಲ್ ತ್ರಿಪಾಠಿ, ಬಾಬಾ ಹರ್ ದೇವ್, ಸುಭಾಷ್ ವೇರ್, ಅಂಜಲಿ ದಾಮ್ನಿಯಾ, ಸೌಮೇಂದ್ರ ಢಾಕಾ, ಜರ್ನೈಲ್ ಸಿಂಗ್, ಡಾ ಜಿಯಾಲಾಲ್ ರಾ, ಕುಮಾರ್ ವಿಶ್ವಾಸ್, ಯೋಗೇಂದ್ರ ಯಾದವ್, ಮಾಯಾಂಕ್ ಗಾಂಧಿಯವರು ಮೇಧಾ ಪಾಟ್ಕರ್, ಮೀರಾ ಸನ್ಯಾಲ್, ಹಾಬುಂಗ್ ಪಯೆಂಗ್, ಬಲಿರಾಮ್ ಪಂದಾರೆ, ಅಲೋಕ್ - ಅಗರ್ವಾಲ್, ಲಿಂಗರಾಜ್, ಹರ್ವಿಂದರ್ ಸಿಂಗ್ , ಯೋಗೇಶ್ ದಹಿಯಾ, ಖಾಲಿದ್ ಪರ್ವೇಜ್ ಪ್ರಾಥಮಿಕ ಪಟ್ಟಿಯಲ್ಲಿ ಸ್ಥಾನಗಳಿಸಿದ್ದರು.

ಕೇಜ್ರಿವಾಲ್ ವಿಧಾನಸಭೆಯಲ್ಲಿ ಜನ ಲೋಕಪಾಲ ಮಸೂದೆಯ ಮಂಡಿಸಲು ವಿಫಲರಾದ್ದರಿಂದ ಕಳೆದ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ