ಅಧಿವೇಶನ: ಲೋಕಸಭೆಯಲ್ಲಿ ಗದ್ದಲ ಕೋಲಾಹಲ

ಸೋಮವಾರ, 24 ಜುಲೈ 2017 (12:50 IST)
ಲೋಕಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಮತ್ತು ಅಡಳಿತ ಪಕ್ಷಗಳ ನಡುವೆ ಗದ್ದಲ, ಕೋಲಾಹಲ ಉಂಟಾಗಿದೆ.
 
ಪ್ರತಿಪಕ್ಷಗಳು ಗೋರಕ್ಷಕರ ಹಿಂಸಾಚಾರ ಕುರಿತಂತೆ ಚರ್ಚೆ ನಡೆಯಲಿ ಎಂದು ಒತ್ತಾಯಿಸಿದ್ದರೆ, ಅಡಳಿತ ಪಕ್ಷದ  ಸದಸ್ಯರು ಭೋಫೋರ್ಸ್ ಹಗರಣ ಬಗ್ಗೆ ಚರ್ಚೆಯಾಗಲಿ ಎಂದು ಪಟ್ಟು ಹಿಡಿದರು.
 
ಅಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಗದ್ದಲ ಕೋಲಾಹಲ ಆರಂಭವಾಯಿತು. ಕೆಲ ಸದಸ್ಯರು ಸಭಾಪತಿಯರ ಆಸನದತ್ತ ಕಾಗದ ಪತ್ರ ಎಸೆದು ಆಕ್ರೋಶ ವ್ಯಕ್ತಪಡಿಸಿದರು. 
 
ಸ್ವೀಡನ್ ಮೂಲದ ಕಂಪೆನಿಯಾದ ಭೋಪೋರ್ಸ್ ಹಗರಣದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಇತರ ಕೆಲವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ