ಸರ್ಧಾರ ವಲ್ಲಭ ಭಾಯಿ ಪಟೇಲ್ ಕಾಂಗ್ರೆಸ್ ಆಸ್ತಿಯಲ್ಲ: ಬಿಜೆಪಿ ಕಿಡಿ

ಬುಧವಾರ, 30 ಅಕ್ಟೋಬರ್ 2013 (15:28 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರಾಜಕೀಯ ಲಾಭ ಪಡೆಯಲು ಸರ್ಧಾರ ವಲ್ಲಭಭಾಯಿ ಪಟೇಲ್ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ, ರಾಷ್ಟ್ರೀಯ ಮುಖಂಡ ಸರ್ಧಾರ ವಲ್ಲಭ ಭಾಯಿ ಪಟೇಲ್ ಕಾಂಗ್ರೆಸ್ ಪಕ್ಷದ ಆಸ್ತಿಯಲ್ಲ ಎಂದು ಕಿಡಿಕಾರಿದೆ.

ವಿಶ್ವದಲ್ಲಿಯೇ ಅತಿ ಎತ್ತರದ ಸರ್ಧಾರ ವಲ್ಲಭಭಾಯಿ ಪಟೇಲ್ ಮೂರ್ತಿಯ ಶಂಕುಸ್ಥಾಪನೆಗಾಗಿ ನೀಡಿದ ಆಹ್ವಾನವನ್ನು ಕೇಂದ್ರ ವಾಣಿಜ್ಯ ಖಾತೆ ಸಚಿವ ಆನಂದ್ ಶರ್ಮಾ ತಿರಸ್ಕರಿಸಿರುವುದು ಸರಿಯಲ್ಲ. ಸ್ವಾತಂತ್ರ್ಯ ಹೋರಾಟಗಾರರಾಜ ವಲ್ಲಭ ಭಾಯಿ ಪಟೇಲ್ ಪ್ರಸ್ತುತವಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಲ್ಲ ಎಂದು ಬಿಜೆಪಿ ಮುಖಂಡ ಶಾಹನವಾಜ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಕ್ಕಿನ ಮನುಷ್ಯ ಸರ್ಧಾರ ವಲ್ಲಭ ಭಾಯಿ ಪಟೇಲ್ ಅವರ ಹೆಸರನ್ನು ಮೋದಿ ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಸೂಕ್ತವಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷ ಯಾವತ್ತೂ ಸರ್ದಾರ ವಲ್ಲಭಭಾಯಿ ಪಟೇಲ್ ಹೆಸರು ಬಳಸುವುದಿಲ್ಲ. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಹೆಸರಿನಲ್ಲಿ ಯಾವುದೇ ಯೋಜನೆಗಳಿಲ್ಲ. ಕಾಂಗ್ರೆಸ್ ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡಿರುವ ಕೇವಲ ನೆಹರು ಮತ್ತು ಗಾಂಧಿ ಹೆಸರಲ್ಲಿ ಮಾತ್ರ ನೂರಾರು .ಯೋಜನೆಗಳಿವೆ ಎಂದು ಬಿಜೆಪಿ ಮುಖಂಡ ಶಾನವಾಜ್ ಹುಸೇನ್ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ