ಸಲಿಂಗಕಾಮ: ಬಿಜೆಪಿ, ಆರೆಸ್ಸೆಸ್‌ ನಿಲುವಿಗೆ ಮುಸ್ಲಿಂ ಮುಖಂಡರ ಬೆಂಬಲ

ಶನಿವಾರ, 21 ಡಿಸೆಂಬರ್ 2013 (13:03 IST)
PTI
ಸಲಿಂಗಕಾಮ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಬಿಜೆಪಿ ಮತ್ತು ಆರೆಸ್ಸೆಸ್‌ ನಿಲುವಿನ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರು ಶ್ಲಾಘಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ತಾಕತ್ತಿದ್ರೆ ಮುಂಬರುವ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಸಲಿಂಗಕಾಮಿಗಳಿಗೆ ಬೆಂಬಲ ಘೋಷಿಸಲಿ ಎಂದು ಸವಾಲ್ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯ ಮುಖಂಡರ ವಿರೋಧದ ಮಧ್ಯೆಯೂ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವೈಯಕ್ತಿಕ ಕಾರಣಗಳಿಂದಾಗಿ ಸಲಿಂಗಕಾಮಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಸದಸ್ಯ ಇಲಿಯಾಸ್ ಆಜ್ಮಿ ತಿಳಿಸಿದ್ದಾರೆ.

ಸಲಿಂಗಕಾಮ ವಿರೋಧದ ಬಗ್ಗೆ ಬಿಜೆಪಿ ತಳೆದಿರುವ ನಿಲುವಿಗೆ ಮುಸ್ಲಿಂ ಸಂಸ್ಥೆಗಳು ಒಕ್ಕೊರಲಿನಿಂದ ಬೆಂಬಲ ಸೂಚಿಸುತ್ತಿರುವುದರಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಹತ್ತಿರವಾಗಲಿವೆ ಎಂದು ಬಿಜೆಪಿ ಮುಖಂಡ ಎಂ.ಜೆ.ಖಾನ್ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಸಲಿಂಗಕಾಮ ತೀರ್ಪಿನ ಬಗ್ಗೆ ಸ್ಪಷ್ಟ ನಿಲುವು ತಳೆದಿದ್ದಾರೆ. ಆದರೆ, ಇತರ ಮುಖಂಡರು ದಂದ್ವ ನಿಲುವು ಹೊಂದಿದ್ದಾರೆ. ಇದೊಂದು ರಾಜಕೀಯ ಅಥವಾ ಜಾತ್ಯಾತೀತ ವಿಷಯವಲ್ಲ ಮಾನವತೆಯ ವಿರೋಧಿಯಾಗಿದೆ ಎಂದು ಟೀಕಿಸಿದ್ದಾರೆ.

ಮುಂಬರುವ 2014ರ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನ್ಯಾಷನಲ್ ಲೋಕತಾಂತ್ರಿಕ್ ಪಕ್ಷದ ಮುಖಂಡರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ