ಸಲಿಂಗಕಾಮ: ಮನೆಯಿಂದ ಓಡಿ ಹೋಗಿ ವಿವಾಹವಾದ ಯುವತಿಯರು

ಸೋಮವಾರ, 31 ಮಾರ್ಚ್ 2014 (17:44 IST)
ಸಲಿಂಗಕಾಮಿಗಳಾದ ಯುವತಿಯರು ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪುತ್ರಿಯ ಗೆಳತಿಯ ಕುಟುಂಬವರು ಅಪಹರಿಸಿದ್ದಾರೆ ಎಂದು ಯುವತಿಯೊಬ್ಬಳ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ರೀಮಾ ಮತ್ತು ಆಕಾಂಶಾ ಎನ್ನುವ ಇಬ್ಬರು ಯುವತಿಯರು ಸಾಸಾರಾಮ್ ಮಂದಿರದಲ್ಲಿ ವಾವಹವಾಗಿ ಹೋಟೆಲ್‌ನಲ್ಲಿ ಕೋಣೆ ಪಡೆದು ವಾಸಿಸುತ್ತಿದ್ದರು.

ಮೊಬೈಲ್ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಇಬ್ಬರು ಯುವತಿಯರು ವಾಸಿಸುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿ ಯುವತಿಯರನ್ನು ವಶಕ್ಕೆ ಪಡೆದಿದ್ದು, ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಎನ್.ಕೆ.ರಜಾಕ್ ಹೇಳಿದ್ದಾರೆ.

ಬಾಲ್ಯದ ಗೆಳತಿಯರಾಗಿದ್ದ ಯುವತಿಯರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಮನೆಯಿಂದ ಓಡಿ ಹೋಗಿ ಆಕ್ಟೋಬರ್ 4 ರಂದು ಸೆಸಾರಾಮ್ ಮಂದಿರದಲ್ಲಿ ವಿವಾಹವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ