ಸೋನಿಯಾ ಅಳಿಯ ರಾಬರ್ಟ್ ವಡೇರಾ ವಿರುದ್ಧ ದೂರು

ಶನಿವಾರ, 10 ಆಗಸ್ಟ್ 2013 (18:27 IST)
PR
PR
ಗುರಗಾಂವ್: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಡೇರಾ ವಿವಾದದ ಸುಳಿಗೆ ಸಿಕ್ಕಿಬಿದ್ದಿದ್ದಾರೆ. ಉದ್ಯಮಿ ರಾಬರ್ಟ್ ವಡೇರಾ ಅವರು ಸ್ಥಿರಾಸ್ತಿ ದೈತ್ಯ ಡಿಎಲ್‌ಎಫ್‌ಗೆ 3.5 ಎಕರೆ ಭೂಮಿಯನ್ನು 58 ಕೋಟಿ ರೂ.ಗೆ ಮಾರಾಟ ಮಾಡುವುದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಮತ್ತು ನಕಲಿ ವಹಿವಾಟುಗಳನ್ನು ಮಾಡಿದ್ದಾರೆ ಎಂದು ಹಿರಿಯ ಐಎಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಹರ್ಯಾಣ ಸರ್ಕಾರಕ್ಕೆ ದೂರು ನೀಡಿದ್ದಾರೆ.

ಮೇನಲ್ಲಿ ರಾಜ್ಯಸರ್ಕಾರಕ್ಕೆ ಸಲ್ಲಿಸಿದ 100 ಪುಟಗಳ ವರದಿಯಲ್ಲಿ ವಡೇರಾ ಗುರಗಾಂವ್ ಶಿಕೋಪುರ್ ಗ್ರಾಮದ 3.5 ಎಕರೆ ಭೂಮಿ ಮಾರಾಟಕ್ಕೆ ಸುಳ್ಳು ನೋಂದಣಿ ದಾಖಲೆಗಳನ್ನು ಬಳಸಿಕೊಂಡಿದ್ದಾರೆ. ವಡೇರಾ ಕಂಪೆನಿ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈ. ಲಿ ಭೂ ನೋಂದಣಿ ಪ್ರಮಾಣಪತ್ರದಲ್ಲಿ ಪ್ರಸಾಪಿಸಿರುವ 7.5 ಕೋಟಿ ರೂ. ಪಾವತಿ ಮಾಡಿಲ್ಲ ಎಂದು ಖೇಮ್ಕಾ ವರದಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ತನಕ ಹರ್ಯಾಣ ಭೂ ದಾಖಲೆ ಇಲಾಖೆಯಲ್ಲಿ ಖೇಮ್ಕಾ ಉನ್ನತ ವ್ಯಕ್ತಿಯಾಗಿದ್ದರು.ಕಳೆದ ಅಕ್ಟೋಬರ್‌ನಲ್ಲಿ ಡಿಎಲ್‌ಎಫ್ ಜತೆ ವಡೇರಾ ಒಪ್ಪಂದವನ್ನು ರದ್ದುಮಾಡಿದರು ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಆಸ್ತಿಹೊಂದಿರುವ ಉದ್ಯಮಿಗೆ ರಿಯಾಯಿತಿ ದರದಲ್ಲಿ ಭೂಮಿ ಮಾರಾಟ ಮಾಡಲಾಗಿದೆಯೇ ಎಂದುಪತ್ತೆಹಚ್ಚಲು ತನಿಖೆಗೆ ಆದೇಶಿಸಿದ್ದರು. ಮೂರು ದಿನಗಳ ನಂತರ ಖೇಮ್ಕಾ ಅವರನ್ನು ವರ್ಗಾವಣೆ ಮಾಡಲಾಯಿತು.

ವೆಬ್ದುನಿಯಾವನ್ನು ಓದಿ