ಹಲವು ವರ್ಷಗಳಿಂದ ನರೇಂದ್ರ ಮೋದಿಗೆ ಆ ಮಹಿಳೆಯೊಂದಿಗೆ ಸಂಪರ್ಕವಿದೆ : ಐಎಎಸ್ ಅಧಿಕಾರಿ

ಶನಿವಾರ, 30 ನವೆಂಬರ್ 2013 (12:58 IST)
PTI
ಗೂಢಾಚಾರಿಕೆ ಪ್ರಕರಣದಲ್ಲಿರುವ ಬೆಂಗಳೂರು ಮೂಲದ ಮಹಿಳೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೊಂದಿಗೆ ಕಳೆದ 2005 ರಿಂದ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಐಎಎಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಕಳೆದ 2005ರಲ್ಲಿ ಗುಜರಾತ್‌ನಲ್ಲಿ ನಡೆದ ಶರದ್ ಉತ್ಸವ್ ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರ ಸಮ್ಮುಖದಲ್ಲಿ ನರೇಂದ್ರ ಮೋದಿ ಬೆಂಗಳೂರು ಮೂಲದ ಮಹಿಳೆಯೊಂದಿಗೆ ಸಂವಾದ ನಡೆಸುತ್ತಿರುವ ಫೋಟೋಗಳು ಬಹಿರಂಗವಾಗಿರುವುದು ದೇಶದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿವೆ.

ನರೇಂದ್ರ ಮೋದಿ ಆಗಸ್ಟ್ 2009 ರಿಂದ ಮಹಿಳೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸರಕಾರ ಮಹಿಳೆಯ ಗೂಢಾಚಾರಿಕೆಯಲ್ಲಿ ಭಾಗಿಯಾಗಿದೆ ಎನ್ನುವುದಕ್ಕೆ ಫೋಟೋಗಳು ಸಾಕ್ಷಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ ಪ್ರಕಾರ, 2005ರ ಅಕ್ಟೋಬರ್ ತಿಂಗಳಲ್ಲಿ ನಡೆದ ಶರದ್ ಉತ್ಸವ್ ಕಾರ್ಯಕ್ರಮದಲ್ಲಿ ಬೆಂಗಳೂರು ಮೂಲದ ಮಹಿಳೆ ಮೊದಲ ಬಾರಿಗೆ ಮೋದಿಯನ್ನು ಭೇಟಿ ಮಾಡಿದ್ದರು ಎಂದು ಅಫಿಡವಿಟ್‌ ಸಲ್ಲಿಸಿದ್ದಾರೆ.

ಮಹಿಳೆಗೆ ಇ-ಮೇಲ್ ಕಳುಹಿಸುವಂತೆ ಮೋದಿ ಕೋರಿದ್ದಲ್ಲದೇ ತಮ್ಮ ವೈಯಕ್ತಿಕ ಇ-ಮೇಲ್ ಕೂಡಾ ಆಕೆಗೆ ರವಾನಿಸಿದ್ದರು. ನಂತರ ಇಬ್ಬರ ನಡುವೆ ಇ-ಮೇಲ್‌ಗಳ ಸುರಿಮಳೆಯಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ 2003 ರಿಂದ 2005ರವರೆಗೆ ಕಛ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಶರ್ಮಾ, ಬೆಂಗಳೂರು ಮೂಲದ ಮಹಿಳೆ ಮೋದಿಯೊಂದಿಗೆ ನಡೆಸಿದ ಇ-ಮೇಲ್‌ ಮತ್ತು ಎಸ್‌ಎಂಎಸ್‌ಗಳ ಬಗ್ಗೆ ಮಾಹಿತಿ ನೀಡಿದ್ದಳು ಎಂದು ಆರೋಪಿಸಿದ್ದಾರೆ.

2005ರ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮಕ್ಕೆ ಮೋದಿ ಆಗಮಿಸಿದ್ದರು. ಮಹಿಳೆ ವಾಸವಾಗಿದ್ದ ಟೆಂಟ್‌ನಲ್ಲಿಯೇ ಮೋದಿ ಕೂಡಾ ರಾತ್ರಿ ಕಳೆದಿರುವುದು ನನಗೆ ಅಚ್ಚರಿ ಮೂಡಿಸಿತು ಎಂದು ಶರ್ಮಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ